Saturday, November 26, 2022

ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ಪತ್ತೆಗೆ ಬರಲಿದೆ ‘ಕೋವಿಡ್ ಅಲಾರಾಂ’

Follow Us

newsics.com
ಬ್ರಿಟನ್: ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ಸೋಂಕು ಪತ್ತೆಮಾಡಲು ಬ್ರಿಟನ್ ವಿಜ್ಞಾನಿಗಳು ಎಲೆಕ್ಟ್ರಿಕ್ ಸಾಧನ ಕಂಡುಹಿಡಿದಿದ್ದಾರೆ.
‘ಕೋವಿಡ್ ಅಲಾರಾಂ’ ಹೆಸರಿನ ಸಾಧನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ಪತ್ತೆಮಾಡಿ ದೂರ ಇರಲು ಸಹಾಯಕವಾಗಿದೆ ಎನ್ನಲಾಗಿದೆ.
ವಿಜ್ಞಾನಿಗಳ ಪ್ರಕಾರ ಕೊರೋನಾ ಸೋಂಕು ಫಿಂಗರ್ ಪ್ರಿಂಟ್ ರೀತಿಯ ವಿಶಿಷ್ಟ ವಾಸನೆ ಹೊಂದಿದ್ದು, ಅದನ್ನು ಈ ಸಾಧನದ ಸೆನ್ಸಾರ್ ಪತ್ತೆಮಾಡಲಿದೆ ಎಂದು ಹೇಳಲಾಗಿದೆ.
ದೇಹದಲ್ಲಿ ಸೋಂಕು ವಿಒಸಿ (volatile organic compounds) ಬದಲಾವಣೆಗೆ ಕಾರಣವಾಗುತ್ತದೆ ಇದರಿಂದ ವಾಸನೆಗೆ ಕಾರಣವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಎಲ್ ಎಸ್ ಎಚ್ ಟಿಎಂ ( London school of hygiene and tropical medicine) ಹಾಗೂ Durham ಯುನಿವರ್ಸಿಟಿಯ ವಿಜ್ಞಾನಿಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಬಗ್ಗೆ ಪ್ರೊ. ಜೇಮ್ಸ್ ಲೋಗನ್ ಈ ತಂತ್ರಜ್ಞಾನದಿಂದ ವರದಿಯನ್ನು ತ್ವರಿತವಾಗಿ ಪಡೆಯಬಹುದು. ಆದರೆ ಅದರ ಫಲಿತಾಂಶ ಎಷ್ಟು ನಿಖರ ಎಂದು ಸಾಬೀತು ಪಡಿಸಲು ಹೆಚ್ಚಿನ ಸಮಯ ಬೇಕಿದೆ ಎಂದಿದ್ದಾರೆ.

 

ಭಾರತ -ಪಾಕ್ ಮಧ್ಯೆ ಈಗ ಅಕ್ಕಿ ಜಗಳ!

ಮತ್ತಷ್ಟು ಸುದ್ದಿಗಳು

vertical

Latest News

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...

ಮಹಾರಾಷ್ಟ್ರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಲ್ಲು ತೂರಾಟ

newsics.com ಬೆಳಗಾವಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮುಂದುವರಿದಿದೆ. ರಾಜ್ಯದ ಸಾರಿಗೆ ಬಸ್ ನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ರಾಜ್ಯದ ಅಥಣಿಗೆ ಬರುತ್ತಿದ್ದ ಬಸ್ ನ ಮೇಲೆ ಕಲ್ಲು ತೂರಾಟ...
- Advertisement -
error: Content is protected !!