ಸಿಯೋಲ್: ನೊಣದ ಪಳೆಯುಳಿಕೆಯೊಂದಕ್ಕೆ ಗಂಗ್ನಮ್ ಸ್ಟೈಲ್ ಎಂದು ಹೆಸರಿಡಲಾಗಿದೆ.
ಈ ನೊಣದ ಪಳಯುಳಿಕೆಯನ್ನು ದಕ್ಷಿಣ ಕೊರಿಯಾದ ಜಿಂಜು ನಗರದಲ್ಲಿ ಪತ್ತೆಹಚ್ಚಲಾಗಿದ್ದು, ಕೊರಿಯಾದ ಪ್ರಖ್ಯಾತ ಪಾಪ್ ಸ್ಟಾರ್ ಪಿಎಸ್ವೈ ಅವರು ಮಾಡಿರುವ ಸಿಗ್ನೇಚರ್ ಸ್ಟೆಪ್ಸ್ಗೂ ನೊಣದ ಪಳೆಯುಳಿಕೆಗೂ ಹೋಲಿಕೆ ಇರುವ ಕಾರಣ ಗಂಗ್ನಮ್ ಸ್ಟೈಲ್ ಎಂದು ನಾಮಕರಣ ಮಾಡಲಾಗಿದೆ. ನೊಣದ ಪಳೆಯುಳಿಕೆಯನ್ನು “ಬುಸ್ಸಿನ್ಯಾಟೊರ್ಮೈ ಗಂಗ್ನಮಿ” ಎಂದು ಕರೆಯಲಾಗಿದೆ.
ಈ ಪಳೆಯುಳಿಕೆ ಮನೆಯ ನೊಣಕ್ಕಿಂತಲೂ ಎರಡು ಪಟ್ಟು ದೊಡ್ಡದಾಗಿದೆ. ನೋಡಲು ಕಡಜದ ಮಾದರಿಯಲ್ಲಿದೆ. ಬೆನ್ನಿನ ಭಾಗದಲ್ಲಿ ಕಪ್ಪು ಮತ್ತು ಹಳದಿ ಹೊದಿಕೆ ಇದ್ದು, ಸಾಮಾನ್ಯ ಕೀಟದ ತೋಳುಗಳು ವಿಶಿಷ್ಟವಾಗಿ ತಿರುಚಿದಂತಿದ್ದು, ನೋಡಲು 2012ರಲ್ಲಿ ವಿಶ್ವದಾದ್ಯಂತ ಭಾರಿ ಗಮನಸೆಳೆದ ಗಂಗ್ನಮ್ ಸ್ಟೈಲ್ ಸಿಗ್ನೆಚರ್ ಸ್ಟೆಪ್ಸ್ ರೀತಿಯಿದೆ.
ಸಂಪೂರ್ಣ ಅಳಿದು ಹೋಗಿರುವ ಝಂಗ್ಸೊಲ್ವಿಡಿಯಾ ಕುಟುಂಬಕ್ಕೆ ಇದು ಸೇರಿದ್ದು ಎಂದು ರಷ್ಯಾದ ಮಾಸ್ಕೋದಲ್ಲಿರುವ ಬೊರಿಸ್ಸಿಯಾಕ್ ಪ್ಯಾಲಿಯಂಟಾಲಜಿಕಲ್ ಇನ್ಸ್ಟಿಟ್ಯೂಟ್ನ ಹಿರಿಯ ಸಂಶೋಧಕ ಅಲೆಕ್ಸಾಂಡರ್ ಖ್ರಮೋವ್ ತಿಳಿಸಿದ್ದಾರೆ.
ಇದು ಗಂಗ್ನಮ್ ಸ್ಟೈಲ್ ನೊಣದ ಪಳೆಯುಳಿಕೆ!
Follow Us