ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ದಾಳಿಯಿಂದ ಬಚಾವಾಗಲು ಬೆಳ್ಳುಳ್ಳಿ ಸೇವನೆ ಪರಿಹಾರ ಎಂಬ ವದಂತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಇದು ಆಧಾರ ರಹಿತ ವರದಿ ಎಂದು ಹೇಳಿದೆ. ಬೆಳ್ಳುಳ್ಳಿ ಸೇವನೆಯಿಂದ ರೋಗ ನಿವಾರಣೆಯಾಗದು. ಇದನ್ನು ಎಲ್ಲರೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.