newsics.com
ಬೀಜಿಂಗ್: ಇಡೀ ವಿಶ್ವವನ್ನೇ ಸ್ಥಗಿತಗೊಳಿಸಿದ ಚೀನಾದ ಕೋವಿಡ್ ವೈರಸ್ ಮಾಡಿದ ಅವಾಂತರ ಒಂದೆರೆಡಲ್ಲ. ಭಾರತ ಸೇರಿದಂತೆ ವಿಶ್ವ ಈ ವೈರಸ್ ನಿಯಂತ್ರಿಸಲು 2ಕ್ಕಿಂತ ಹೆಚ್ಚು ವರ್ಷಗಳೇ ತೆಗೆದುಕೊಂಡಿದೆ. ಇದೀಗ ಚೀನಾದ ಪ್ರಖ್ಯಾತ ವೈರಾಲಜಿಸ್ಟ್ ಎಚ್ಚರಿಕೆಯೊಂದು(ಸೆ.25) ನೀಡಿದ್ದಾರೆ. ಮತ್ತೊಂದು ಕೋವಿಡ್ ರೀತಿಯ ವೈರಸ್ ಎದುರಿಸಲು ಸಜ್ಜಾಗಿ ಎಂದಿದ್ದಾರೆ.
ಪ್ರಾಣಿಗಳು, ಪಕ್ಷಿಗಳು ಪ್ರಮುಖವಾಗಿ ಬಾವಲಿಗಳಿಂದ ಹರಡುವ ವೈರಸ್ ಕುರಿತು ಸಂಶೋಧನೆ ನಡೆಸುತ್ತಿರುವ ಶಿ ಝೆಂಗ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಕೊರೋನಾ ರೀತಿಯ ವೈರಸ್ ಮತ್ತೆ ಅಪ್ಪಳಿಸಲಿದೆ. ಇದಕ್ಕಾಗಿ ವಿಶ್ವ ಈಗಲೇ ಸಿದ್ಧತೆ ನಡೆಸಿಕೊಳ್ಳಬೇಕು ಎಂದಿದ್ದಾರೆ. ವುಹಾನ್ ವೈರಾಲಜಿ ಲ್ಯಾಬ್’ನ ಪ್ರಮುಖ ಸಂಶೋಧಕಿಯಾಗಿರುವ ಝೆಂಗ್ಲಿ ನೀಡಿದ ಈ ಎಚ್ಚರಿಕೆ ಇದೀಗ ಮತ್ತೆ ತಲ್ಲಣ ಸೃಷ್ಟಿಸಿದೆ.
ಮನುಷ್ಯನ ಆರೋಗ್ಯವನ್ನೇ ಹಾಳುಮಾಡಬಲ್ಲ ವೈರಸ್’ಗಳ ಕುರಿತು ಶಿ ಝಿಂಗ್ಲಿ ಅಧ್ಯಯನ ನಡೆಸಿದ್ದಾರೆ. ಈ ಕುರಿತು ಬೃಹತ್ ವರದಿ ತಯಾರಿಸಿರುವ ಝೆಂಗ್ಲಿ, ಮಾನವನ ಆರೋಗ್ಯಕ್ಕೆ ಮಾರಕವಾಗಬಲ್ಲ 40 ಕೊರೋನಾ ರೀತಿಯ ವೈರಸ್ ಪತ್ತೆ ಹಚ್ಚಿದ್ದಾರೆ. ಈ 40 ವೈರಸ್ ಪೈಕಿ ಕೋವಿಡ್ ಸೇರಿದಂತೆ ಕೇವಲ 6 ವೈರಸ್ ಈಗಾಗಗಲೇ ಮಾನವನಿಗೆ ತೀವ್ರ ಸಂಕಷ್ಟ ತಂದಿದೆ. ಇನ್ನುಳಿದ ವೇರಿಯೆಂಟ್ ವೈರಸ್ ಭವಿಷ್ಯದಲ್ಲಿ ಅಪ್ಪಳಿಸಲಿದೆ ಎಂದಿದ್ದಾರೆ.
ಸ್ಕಾರ್ಪಿಯೋ ಕಾರ್ ಕಂಪನಿ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಗ್ರಾಹಕ