newsics.com
ಲಂಡನ್: ಪ್ರಸಿದ್ಧ ಶಬ್ಧಕೋಶ ಆಕ್ಸ್ ಫರ್ಡ್ ವರ್ಷದ ಪದವಾಗಿ ಗೋಬ್ಲಿನ್ ಮೋಡ್ ನ್ನು ಆಯ್ಕೆ ಮಾಡಿದೆ. ಕೊರೋನಾ ವಿಶ್ವದಿಂದ ತೊಲಗಿದ ಬಳಿಕ ಮಾನವನ ಮನೋಸ್ಥಿತಿಯನ್ನು ಈ ಪದ ಪ್ರತಿನಿಧಿಸುತ್ತಿದೆ.
ಗೋಬ್ಲಿನ್ ಮೋಡ್ ಪದಕ್ಕೆ ಆಲಸಿ, ಮಂದ, ದುರಾಸೆಯ ಬುದ್ದಿ ಎಂಬ ಅರ್ಥ ಇದೆ. ಲಾಕ್ ಡೌನ್ ವೇಳೆ ನಾಲ್ಕು ಕೋಣೆಗಳ ಮಧ್ಯೆ ಬಂಧಿಯಾಗಿದ್ದ ಜನರು ಕೊರೋನಾದ ಬಳಿಕ ಏನು ಮಾಡಬೇಕು ಎಂದು ತಿಳಿಯದೆ ಪರದಾಡುತ್ತಿರುವ ಸ್ಥಿತಿಯನ್ನು ಗೋಬ್ಲಿನ್ ಮೋಡ್ ಸೂಚಿಸುತ್ತಿದೆ.
ವರ್ಷದ ಪದದ ಆಯ್ಕೆ ಮೆಟಾವರ್ಸ್ ಮತ್ತು ಐ ಸ್ಟಾಂಡ್ ವಿದ್ ಕೂಡ ಪೈಪೋಟಿಯಲ್ಲಿ ಇದ್ದವು. ಆನ್ ಲೈನ್ ಸಮೀಕ್ಷೆ ಮೂಲಕ ವರ್ಷದ ಪದವನ್ನು ಆಯ್ಕೆ ಮಾಡಲಾಗಿದೆ