Thursday, May 26, 2022

ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು…!

Follow Us

newsics.com
ಕೊಲೆರಾಡೋ(ಅಮೆರಿಕ): ನಾಲಿಗೆ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯೊಬ್ಬರ ನಾಲಿಗೆಯಲ್ಲಿ ಕೂದಲು ಬೆಳೆದಿದ್ದು, ಹೊಸತೊಂದು ಸಮಸ್ಯೆ ಸೃಷ್ಟಿಸಿದೆ.
ಈ ಮಹಿಳೆಯ ಹೆಸರು ಕ್ಯಾಮರೂನ್ ನ್ಯೂಸಮ್. 43 ವರ್ಷದ ಕ್ಯಾಮರೂನ್ ಕೊಲೆರಾಡೋದಲ್ಲಿ ಜಿಮ್ನಾಸ್ಟಿಕ್ ತರಬೇತುದಾರೆ. ಕ್ಯಾಮರೂನ್ ನ್ಯೂಸಮ್‌ಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದಂತಾಯಿತು.
ತಪಾಸಣೆಗೊಳಗಾದಾಗ ಕ್ಯಾಮರೂನ್‌ ನಾಲಿಗೆ ಕ್ಯಾನ್ಸರ್‌ಗೆ ತುತ್ತಾಗಿರುವುದು ಗೊತ್ತಾಗಿದೆ. ನಾಲಿಗೆ ರುಚಿ ಗ್ರಹಣ ಶಕ್ತಿ ಕಳೆದುಕೊಂಡಿದ್ದರಿಂದ ಏಳು ಪೌಂಡ್ ತೂಕ ನಷ್ಟವಾಯಿತು. ನಾಲಿಗೆ ಮೇಲಿನ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದ ಕ್ಯಾಮರೂನ್ ತನ್ನ ಅರ್ಧ ನಾಲಿಗೆಯನ್ನೇ ಕಳೆದುಕೊಳ್ಳಬೇಕಾಯಿತು. ಆಗ ಆಕೆಯ ಅರ್ಧ ನಾಲಿಗೆಗೆ ಕಾಲಿನ ಚರ್ಮವನ್ನು ಕಸಿ ಮಾಡಲಾಯಿತು.

ಶಸ್ತ್ರಚಿಕಿತ್ಸೆ ನಡೆದು 9 ತಿಂಗಳ ಬಳಿಕ ಹೊಸದೊಂದು ಸಮಸ್ಯೆ ಶುರುವಾಯ್ತು. ತನ್ನ ಕಾಲಿನ ಚರ್ಮ ಜೋಡಿಸಲಾಗಿದ್ದ ಅರ್ಧ ನಾಲಿಗೆಯ ಮೇಲೆ ಕೂದಲು ಬೆಳೆಯಲಾರಂಭಿಸಿದೆ. ಇದರಿಂದ ಕ್ಯಾಮರೂನ್ ಕಂಗಾಲಾಗಿದ್ದಾಳೆ. ಆದರೂ ಅನ್ಯಮಾರ್ಗವಿಲ್ಲದೆ ಬದುಕುತ್ತಿದ್ದಾಳೆ. ಊಟ ಮಾಡಿದಾಗ, ಮಾತನಾಡಿದಾಗ ನಾಲಿಗೆಯಲ್ಲಿನ‌ ಕೂದಲು ಕಿರಿಕಿರಿಯುಂಟುಮಾಡುತ್ತಂತೆ. ರುಚಿಯೂ ಕಾಣಿಸುತ್ತಿಲ್ಲವಂತೆ. ಹೀಗೆ ಸಮಸ್ಯೆಗಳ ಮಧ್ಯೆಯೂ ಕ್ಯಾಮರೂನ್ ತಮ್ಮ ಜಿಮ್ನಾಸ್ಟಿಕ್ ವೃತ್ತಿಗೆ ಮರಳಿದ್ದಾರೆ. ಇದೇ ಜೀವನೋತ್ಸಾಹ.

ಕಿವಿಯಲ್ಲಿ‌ ನೋವು, ಶಿಳ್ಳೆ ಸದ್ದು, ಝುಮ್ ಅನುಭವ- ಒಮೈಕ್ರಾನ್ ಸೋಂಕಿನ ಲಕ್ಷಣ

ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ

ವದಂತಿ ಬೆನ್ನಲ್ಲೇ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಸುಧಾರಣೆ ಎಂದ ವೈದ್ಯರು

ವೀಕೆಂಡ್ ಮೂಡ್‌ನಲ್ಲಿ ನಟ ಯಶ್, ಮಗಳು ಐರಾಳಿಗೆ ಸ್ಪೆಷಲ್ ಕ್ಲಾಸ್!

ಸರ್ಜರಿ ಮಾಡುತ್ತಲೇ ಕೊನೆಯುಸಿರೆಳೆದ ಖ್ಯಾತ ನ್ಯೂರೋ ಸರ್ಜನ್

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!