newsics.com
ಕಾಂಗೊ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಚಿನ್ನದ ಗಣಿಯೊಂದು ಕುಸಿದು ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಕಿನ್‌ಶಾಸದ ಕಮಿಟುಗ ನಗರದ ಸಮೀಪ ಈ ದುರಂತ ಸಂಭವಿಸಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಭಾರೀ ಮಳೆಯಿಂದಾಗಿ ಗಣಿ ಕುಸಿದು ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಸ್ವಯಂಸೇವಕ ಸಂಘಟನೆ ತಿಳಿಸಿದೆಯೆಂದು ‘ಸ್ಕೈ ನ್ಯೂಸ್’ ವರದಿ ಮಾಡಿದೆ. ಕಳಪೆ ಸುರಕ್ಷತಾ ಮಾನದಂಡಗಳಿಂದಾಗಿ ದೇಶದಲ್ಲಿ ಗಣಿ ಅಪಘಾತಗಳು ನಡೆಯುವುದು ಸಾಮಾನ್ಯ ಎಂದು ಬಿಬಿಸಿ ವರದಿ ಹೇಳಿದೆ.
ಭಾರೀ ಮಳೆ, ಗಣಿ ಕುಸಿದು 50 ಜನ ಸಾವು
Follow Us