ಟೆಹರಾನ್: ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರದ ಪ್ರಾರ್ಥನೆಯ ನೇತೃತ್ವ ವಹಿಸಲಿದ್ದಾರೆ. ರಾಜಧಾನಿ ಟೆಹರಾನ್ ನಲ್ಲಿ ಈ ಪ್ರಾರ್ಥನೆ ನಡೆಯಲಿದೆ. ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಖಮೇನಿ, ಈ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದ್ದಾರೆ. ಉಕ್ರೇನ್ ವಿಮಾನವನ್ನು ಇರಾನ್ ಹೊಡೆದುರುಳಿಸಿದ ಬಳಿಕ ಇರಾನ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದಲ್ಲದೆ, ಅಮೆರಿಕ ಹೇರಿರುವ ದಿಗ್ಬಂಧನದಿಂದಾಗಿ ಇರಾನ್ ಆರ್ಥಿಕ ಸಂಕಷ್ಟವನ್ನು ಕೂಡ ಎದುರಿಸುತ್ತಿದೆ.