Sunday, December 5, 2021

ಕೊರೋನಾ ಸೋಂಕಿನಿಂದ ಹಾಲಿವುಡ್ ನಟ ಬ್ಲಮ್ ಸಾವು

Follow Us

ವಾಷಿಂಗ್ಟನ್: ಕೊರೋನಾ ಸೋಂಕಿನಿಂದ ಹಾಲಿವುಡ್ ಸ್ಟಾರ್ ನಟ, ಕ್ರೊಕೊಡೈಲ್ ಡ್ಯೂನ್ ಡೀ ಮತ್ತು ನೆಟ್ ಫ್ಲಿಕ್ಸ್ ನ ‘ಯೂ’ ಸರಣಿ ಖ್ಯಾತಿಯ ಮಾರ್ಕ್ ಬ್ಲಮ್ (69) ಕೊನೆಯುಸಿರೆಳೆದಿದ್ದಾರೆ ಎಂದು ಫೋಕ್ಸ್ ನ್ಯೂಸ್ ವರದಿ ಮಾಡಿದೆ.
‘ನನ್ನ ಪತಿ ನಿನ್ನೆ ಕೋವಿಡ್ 19 ವೈರಸ್ ನಿಂದ ನ್ಯೂಯಾರ್ಕ್ ಪ್ರೆಸ್ ಬೈಟೇರಿಯನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಬ್ಲಮ್ ಪತ್ನಿ ಜನೆಟ್ ಝಾರೀಶ್ ಇ ಮೇಲ್ ಮೂಲಕ ಈ ಮಾಹಿತಿ ಖಚಿತಪಡಿಸಿದ್ದಾರೆ.
ನ್ಯೂ ಜರ್ಸಿಯಲ್ಲಿ 1950ರಲ್ಲಿ ಜನಿಸಿದ್ದ ಮಾರ್ಕ್ 1983ರಲ್ಲಿ ಲವ್ ಸಿಕ್ ಸಿನಿಮಾದಲ್ಲಿ ನಟನಾಗಿ ಅಭಿನಯಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಸೈಂಟ್ ಎಲ್ಸ್ ವೇರ್, ಡೆಸ್ಪರೇಟ್ಲಿ ಸೀಕಿಂಗ್ ಸುಸಾನ್ ನಂತಹ ಹಿಟ್ ಚಿತ್ರಗಳನ್ನು ನೀಡಿದ್ದರು.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!