newsics.com
ಮಾಸ್ಕೋ: ರಷ್ಯಾದಲ್ಲಿ ಮತ್ತೊಂದು ವಿಷ ಮದ್ಯ ದುರಂತ ಸಂಭವಿಸಿದೆ. ಕಳ್ಳಭಟ್ಟಿ ಸೇವಿಸಿದ ಪರಿಣಾಮ ರಷ್ಯಾದ ನಾಲ್ಕನೇ ಅತೀ ದೊಡ್ಡ ನಗರವಾಗಿರುವ ಯೆಕೆಟಿನ್ ಬರ್ಗ್ ನಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ಟೋಬರ್ ತಿಂಗಳ ಆರಂಭದಲ್ಲಿ ಇದೇ ರೀತಿಯ ದುರಂತ ನಡೆದಿತ್ತು. ಒರನ್ ಬರ್ಗ್ ನಲ್ಲಿ ಸಂಭವಿಸಿದ ವಿಷ ಮದ್ಯ ದುರಂತದಲ್ಲಿ 36 ಮಂದಿ ಪ್ರಾಣ ಕಳೆದುಕೊಂಡಿದ್ದರು.
ವಿಷ ಮದ್ಯ ತಯಾರಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸೂಚಿಸಿದೆ.