newsics.com
ವಾಷಿಂಗ್ಟನ್ : ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಡಲ್ಲಾಸ್ ನಲ್ಲಿ ಪ್ರಾರ್ಥನಾ ಮಂದಿರದಲ್ಲಿ ಒತ್ತೆಸೆರೆಯಲ್ಲಿ ಇರಿಸಲಾಗಿದ್ದ ಎಲ್ಲರನ್ನು ರಕ್ಷಿಸಲಾಗಿದೆ.
12 ಗಂಟೆ ಬಳಿಕ ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಅಮೆರಿಕದ ಸೇನಾಧಿಕಾರಿಯ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪಾಕ್ ನಾಗರಿಕ ಸಿದ್ದೀಕಿ ಎಂಬಾತನ ಬಿಡುಗಡೆಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಆದರೆ ಈ ಸಂಬಂಧ ಅಧಿಕೃತ ಹೇಳಿಕೆಯನ್ನು ಅಧಿಕಾರಿಗಳು ನೀಡಿಲ್ಲ.
ಅಪ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಮೆರಿಕದ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕ್ ಮೂಲದ ಸಿದ್ದೀಕಿ ಎಂಬಾತನನ್ನು ಬಂಧಿಸಲಾಗಿದೆ.
ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಟೆಕ್ಸಾಸ್ ಗವರ್ನರ್ ಗ್ರೇಗ್ ಅಬೋಲ್ ದೃಢೀಕರಿಸಿದ್ದಾರೆ.