ವಾಷಿಂಗ್ಟನ್: ಇರಾನ್ ವಿರುದ್ಧ ಗುಡುಗುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಸೇನಾ ಕಾರ್ಯಾಚರಣೆ ಅಧಿಕಾರವನ್ನು ಅಮೆರಿಕದ ಜನ ಪ್ರತಿನಿಧಿ ಸಭೆ ಮೊಟಕುಗೊಳಿಸಿದೆ. ಇದು ಪ್ರತೀಕಾರದ ಮಾತನಾಡುತ್ತಿರುವ ಟ್ರಂಪ್ ಗೆ ನಿರಾಶೆ ಮೂಡಿಸಿದೆ. ಈ ಕುರಿತ ನಿರ್ಣಯನ್ನು ಜನ ಪ್ರತಿನಿಧಿ ಸಭೆ ಅಂಗೀಕರಿಸಿದೆ. ಅಮೆರಿಕದ ಜನ ಪ್ರತಿನಿಧಿ ಸಭೆಯ ನಿರ್ಧಾರ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಆಶಾವಾದ ಮೂಡಿಸಿದೆ.