ಹೆಲ್ಡರ್ ಬರ್ಗ್: ಜರ್ಮನಿಯ 14 ವಿಶ್ವವಿದ್ಯಾಲಯಗಳಲ್ಲಿ ನಿಯಮಿತವಾಗಿ ಸಂಸ್ಕೃತ ಕಲಿಸಲಾಗುತ್ತಿದೆಯಾದರೂ, ಅದು ನಿರೀಕ್ಷಿತ ಪ್ರಮಾಣದಲ್ಲಿ ಜಾಗತಿಕವಾಗಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆಯೆ?
ಹೌದೆನ್ನುತ್ತದೆ ಈ ವರದಿ. ಸಂಸ್ಕೃತ ಕಲಿಕೆಗಾಗಿ ಹರಿದುಬಂದಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಜರ್ಮನಿ ಹಾಗೂ ಇಟಲಿಯ 14 ವಿವಿಗಳಲ್ಲಿ ಸಂಸ್ಕೃತ ಕಲಿಕೆಗೆ ಪ್ರೋತ್ಸಾಹ ನೀಡಲಾಯಿತಾದರೂ ಸಂಸ್ಕೃತ ಅಂದಿನ ಜನಪ್ರಿಯತೆ ಉಳಿಸಿಕೊಂಡಿಲ್ಲ.
ಬೇಡಿಕೆ ಹಿನ್ನೆಲೆಯಲ್ಲಿ ಹೆಲ್ಡರ್ ಬರ್ಗ್ ನ ದಕ್ಷಿಣ ಏಷಿಯಾ ವಿವಿ ಸ್ವಿಜರ್ ಲ್ಯಾಂಡ್, ಇಟಲಿ ಹಾಗೂ ಭಾರತದಲ್ಲಿ ಕೂಡ ಬೇಸಿಗೆಯ ಸಂಸ್ಕೃತ ಭಾಷಾ ತರಗತಿಗಳನ್ನು ಆರಂಭಿಸಬೇಕಾಯಿತು. ಆದರೆ, ಒಂದೆರಡು ವರ್ಷಗಳಲ್ಲೇ ಹಾಜರಾತಿ ಕೊರತೆಯಿಂದ ಅದನ್ನು ಮುಚ್ಚುವ ಪರಿಸ್ಥಿತಿ ಎದುರಾಯಿತು ಎಂದು ಅಲ್ಲಿನ ಪ್ರೊಫೆಸರ್ ಒಬ್ಬರು ತಿಳಿಸಿದ್ದಾರೆ.