Thursday, December 8, 2022

ಮೈಕ್ರೋಫೋನ್‌ಗೆ ಕಾಂಡೋಮ್ ಸುತ್ತಿ ವರದಿ ಮಾಡಿದ ಪತ್ರಕರ್ತೆ!

Follow Us

newsics.com

ಫ್ಲೊರಿಡಾ: ಇಯಾನ್ ಚಂಡಮಾರುತದಿಂದ ತತ್ತರಿಸಿರುವ ಫ್ಲೊರಿಡಾದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ ಕಾರ್ಯಕ್ಷಮತೆ‌ ಮೆರೆದಿದ್ದಾರೆ.

ಪತ್ರಕರ್ತೆ ಕೈಲಾ ಗೇಲರ್ ಚಂಡಮಾರುತ ಅಪ್ಪಳಿಸಿದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದಾರೆ. ಮಳೆಗಾಳಿಯಿಂದ ತಮ್ಮ ಮೈಕ್ರೋಫೋನ್ ರಕ್ಷಿಸಿಕೊಳ್ಳಲು ಕಂಡುಕೊಂಡ ಉಪಾಯದಿಂದ ಇದೀಗ ಅವರು ಸುದ್ದಿಯಲ್ಲಿದ್ದಾರೆ. ಮೈಕ್ರೋಫೋನ್‌ಗೆ ಕಾಂಡೋಮ್ ಸುತ್ತಿ ವರದಿಗಾರಿಕೆ ಮಾಡುತ್ತಿರುವ ಅವರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನನ್ನ ಮೈಕ್ರೋಫೋನ್‌ಗೆ ಹಾಕಿರುವುದು ಏನು ಎಂದು ಬಹಳಷ್ಟು ಜನ ಕುತೂಹಲದಿಂದ ಕೇಳುತ್ತಿದ್ದೀರಿ. ನೀವೇನು ಮನಸಿನಲ್ಲಿ ಯೋಚಿಸುತ್ತಿದ್ದೀರೋ ಅದು ಅದೇ ಆಗಿದೆ. ಹೌದು ಇದು ಕಾಂಡೋಮ್. ಇಲ್ಲಿ ಎಡಬಿಡದೆ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ಈ ಉಪಾಯವನ್ನು ಕಂಡುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಟ್ವೀಟ್‌ಗೆ ಬಗೆಬಗೆಯ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಹೆಸರು ಬದಲಾವಣೆಗೆ ಒಪ್ಪಿದ ಚುನಾವಣಾ ಆಯೋಗ: ಟಿಆರ್‌ಎಸ್ ಇನ್ನು ಬಿಆರ್‌ಎಸ್

newsics.com ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಹೆಸರು ಬದಲಾಗಿದೆ. ಟಿಆರ್‌ಎಸ್‌ ಪಕ್ಷಕ್ಜೆ ಭಾರತ ರಾಷ್ಟ್ರ ಸಮಿತಿ (Bharat Rashtra Samithi)...

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಬುಧವಾರ ಸಂಜೆ ಸೈನಿಕರು...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...
- Advertisement -
error: Content is protected !!