newsics.com
ವಾಷಿಂಗ್ಟನ್: ವಿಶ್ವದ ಅತ್ಯಂತ ವೇಗದ ಓಟಗಾರ ಹಾಗೂ ಒಲಿಂಪಿಕ್ಸ್ ನಲ್ಲಿ ಎಂಟು ಚಿನ್ನದ ಪದಕ ಪಡೆದಿರುವ ಉಸೇನ್ ಬೋಲ್ಟ್ ಅವಳಿ ಮಕ್ಕಳ ತಂದೆಯಾಗಿದ್ದಾರೆ.
ಮಕ್ಕಳಿಗೆ ಸೈಂಟ್ ಲಿಯೋ ಬೋಲ್ಟ್ , ಥಂಡರ್ ಬೋಲ್ಟ್ ಎಂದು ಹೆಸರಿಡಲಾಗಿದೆ.
ಉಸೇನ್ ಬೋಲ್ಟ್ ಅವರ ಪ್ರೇಯಸಿ ಕಾಸಿ ಬೆನೆಟ್ ಈ ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದಾರೆ.
2020ರಲ್ಲಿ ಉಸೇನ್ ಬೋಲ್ಟ್ ತಮ್ಮ ಕುಟುಂಬದ ಮೊದಲ ಮಗುವನ್ನು ಸ್ವಾಗತಿಸಿದ್ದರು. ಮೊದಲ ಮಗುವಿನ ಹೆಸರು ಒಲಿಂಪಿಯಾ.