newsics.com
ಬೀಜಿಂಗ್: ಭಾರತದ ಜತೆ ದಿನ ನಿತ್ಯ ಸಂಘರ್ಷಕ್ಕೆ ಇಳಿದಿರುವ ಚೀನಾ ಇದೀಗ ಸಮರವನ್ನು ಮುದ್ರಣ ಮಾಧ್ಯಮಕ್ಕೆ ವಿಸ್ತರಿಸಿದೆ. ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಸಂಬಂಧ ಸಂಪಾದಕೀಯ ಬರೆದಿದೆ. ಭಾರತಕ್ಕೆ ಎಚ್ಚರಿಕೆ ನೀಡಿದೆ.
ಯುದ್ಧ ಆರಂಭಿಸಿದರೆ ಭಾರತಕ್ಕೆ ಸೋಲು ಉಂಟಾಗಲಿದೆ. ಇದು ಸಂಪಾದಕೀಯದಲ್ಲಿ ಬರೆದಿರುವ ಬೊಗಳೆ.
ಗಡಿ ವಿಷಯದಲ್ಲಿ ಚೀನಾ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಭಾರತದ ಒತ್ತಡ ತಂತ್ರಕ್ಕೆ ಮಣಿಯುವುದು ಇಲ್ಲ ಎಂದು ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಹೇಳಿದೆ.