newsics.com
ವಾಷಿಂಗ್ಟನ್: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಇದೀಗ ನೆರವು ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮುಂಗಡ ಪತ್ರ ಕುರಿತಂತೆ ಹೆಚ್ಚಿನ ಮಾಹಿತಿ ನೀಡುವಂತೆ ಐಎಂಎಫ್ ಸೂಚಿಸಿದೆ.
ಇದರ ಜತೆಗೆ ಪಾಕಿಸ್ತಾನ ತನ್ನ ಆರ್ಥಿಕ ನೀತಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಸಂದೇಶವನ್ನು ಐಎಂಎಫ್ ರವಾನಿಸಿದೆ ಎಂದು ವರದಿಯಾಗಿದೆ.
ಅಮೆರಿಕ ಸೇರಿದಂತೆ ಇತರ ಯಾವುದೇ ರಾಷ್ಟ್ರದಿಂದ ಪಾಕಿಸ್ತಾನಕ್ಕೆ ನಿರೀಕ್ಷಿತ ನೆರವು ದೊರೆತಿಲ್ಲ. ಪಾಕಿಸ್ತಾನದಲ್ಲಿ ಹಣ ದುಬ್ಬರ ಹೆಚ್ಚಾಗಿದ್ದು ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಭಾರತ ಮೂಲದ ಗೀತಾ ಗೋಪಿನಾಥ್ ಐಎಂಎಫ್ ನಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.
ಬಿಬಿಸಿ ಸಾಕ್ಷ್ಯ ಚಿತ್ರ ವಿವಾದ: ಆ್ಯಂಟನಿ ಪುತ್ರ ಕಾಂಗ್ರೆಸ್ ಗೆ ರಾಜೀನಾಮೆ