Monday, March 8, 2021

ಟ್ರಂಪ್ ವಾಗ್ದಂಡನೆ ಅನಗತ್ಯ: ಅಮೆರಿಕ ಸೆನೆಟ್ ಅಭಿಮತ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಬೇಕೆಂಬ ಪ್ರಸ್ತಾಪಕ್ಕೆ ಅಮೆರಿಕದ ಸೆನಟ್ ನಲ್ಲಿ ಸೋಲು ಉಂಟಾಗಿದೆ. ಸೆನಟ್ ಟ್ರಂಪ್ ನಿಲುವಿಗೆ ಬೆಂಬಲ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಡೆದ ಮತದಾನದಲ್ಲಿ ನಿರ್ಣಯಕ್ಕೆ ಸೋಲಾಗಿದೆ. 48 ಮಂದಿ ಸದಸ್ಯರು ಪರವಾಗಿ ಮತ ಚಲಾಯಿಸಿದರೆ 52 ಮಂದಿ ವಾಗ್ದಂಡನೆಯನ್ನು ವಿರೋಧಿಸಿದರು. ಟ್ರಂಪ್ ಅಧಿಕಾರ ದುರುಪಯೋಗ ನಡೆಸಿಲ್ಲ ಎಂದು ಸೆನಟ್ ಸದಸ್ಯರು ಹೇಳಿದ್ದಾರೆ. ನಾಳೆ ಈ ಸಂಬಂಧ ಪ್ರತಿಕ್ರಿಯೆ ನೀಡುವುದಾಗಿ ಟ್ರಂಫ್ ಘೋಷಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 18,599ಮಂದಿಗೆ ಕೊರೋನಾ ಸೋಂಕು, 97 ಜನರ ಬಲಿ

newsics.com ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 18,599 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ, 1,12,29,398...

ಕೃಷಿ ನೀತಿಗೆ ವಿರೋಧ: ಪ್ರತಿಭಟನೆ ನಡೆಸಲು ರೈತ ಮಹಿಳೆಯರ ಆಗಮನ

newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ 102ನೇ ದಿನಕ್ಕೆ ಕಾಲಿರಿಸಿದೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಪಂಜಾಬ್...

ಎ ಎಸ್ ಐ ಗೆ ಕಪಾಳ ಮೋಕ್ಷ ಆರೋಪ: ಆರೋಪಿ ಮಹಿಳೆ ಬಂಧನ

newsics.com ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಲು ಮುಂದಾದ ಎಎಸ್ಐ ಬಸವಯ್ಯ ಅವರಿಗೆ ಕಪಾಳ ಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅಪೂರ್ವಿ ಡಿಯಾಸ್ ಎಂದು ಗುರುತಿಸಲಾಗಿದೆ....
- Advertisement -
error: Content is protected !!