Saturday, November 26, 2022

ನಿಲ್ಲದ ಮಳೆ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ‌ ದಿನದಾಟ ರದ್ದು

Follow Us

newsics.com

ಸೌತಾಂಪ್ಟನ್: ಮಳೆ ಹಿನ್ನೆಲೆಯಲ್ಲಿ ಶುಕ್ರವಾರ ಆರಂಭವಾಗಬೇಕಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದ ಮೊದಲ‌ ದಿನದ ಆಟವನ್ನು ರದ್ದುಗೊಳಿಸಲಾಗಿದೆ.

ನಿಗದಿಯಂತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು (ಜೂನ್ 18) ಆರಂಭಿಸಬೇಕಿತ್ತು. ಆದರೆ, ಸಾಕಷ್ಟು ಕುತೂಹಲ ಮೂಡಿಸಿದ್ದ ಆಟಕ್ಕೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಟಾಸ್ ಗೂ ಮೊದಲು ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. 2.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದ ತಡವಾಗಿ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಮ್ಯಾಚ್ ನ ಮೊದಲ ಸೆಷನ್ ರದ್ದುಗೊಳಿಸಲಾಗಿತ್ತು. ಆದರೆ ಮಳೆ ಮುಂದುವರಿದ ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಗಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡುತ್ತಿದ್ದಾರೆ. ಆದರೆ, ಸೌತಾಂಪ್ಟನ್ ನ ಹವಾಮಾನ ಆಡಲು ಪೂರಕವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ‌ ಮಾಡಿವೆ.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!