newsics.com
ಕಾಬೂಲ್: ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಅಗತ್ಯವಿಲ್ಲ ಎಂದು ಅಫ್ಘಾನಿಸ್ತಾನದಲ್ಲಿ ಅದನ್ನು ತಾಲಿಬಾನ್ ರದ್ದು ಮಾಡಿದೆ.
ಮಹಿಳಾ ಸಚಿವಾಲಯ, ಚುನಾವಣಾ ಆಯೋಗ ಸೇರಿದಂತೆ ಅಫ್ಘಾನಿಸ್ತಾನ ಜನರ ಸ್ವಾತಂತ್ರ್ಯವನ್ನು ರಕ್ಷಿಸುತ್ತಿದ್ದ ಹಲವು ಸಂಸ್ಥೆಗಳನ್ನು ರದ್ದುಮಾಡಿದೆ.
ಮಾನವ ಹಕ್ಕುಗಳ ರಕ್ಷಣೆಗೆ ಅಫ್ಘಾನಿಸ್ತಾನದಲ್ಲಿ ಸಂಘ ಸಂಸ್ಥೆಗಳಿವೆ. ಅವುಗಳು ನ್ಯಾಯಾಂಗ ದೊಂದಿಗೆ ಸಂಪರ್ಕವನ್ನು ಹೊಂದಿದ್ದು ಅಫ್ಘಾನಿಸ್ತಾನದಲ್ಲಿ ಸದ್ಯಕ್ಕೆ ಮಾನವ ಹಕ್ಕುಗಳ ಆಯೋಗದ ಅಗತ್ಯ ಇರುವುದಿಲ್ಲ. ಎಂದು ಸರ್ಕಾರದ ಉಪ ವಕ್ತಾರ ಇನಾಮುಲ್ಲಾ ಸಮಂಗನಿ ಹೇಳಿದ್ದಾರೆ.