ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲ ಸಾರ್ವಜನಿಕ ಸಂವಾದದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಹೆಸರನ್ನು ಎಳೆದುತಂದಿದ್ದಾರೆ. ರಷ್ಯಾ, ಚೀನಾ ಮತ್ತು ಭಾರತ ಕೊರೋನಾದಲ್ಲಿ ಮೃತಪಟ್ಟವರ ಸರಿಯಾದ ಸಂಖ್ಯೆ ಬಹಿರಂಗಪಡಿಸಿಲ್ಲ ಎಂದು ಟ್ರಂಪ್ ಸಂವಾದದಲ್ಲಿ ಆರೋಪಿಸಿದರು.
ಡೆಮಾಕ್ರಟ್ ಅಭ್ಯರ್ಥಿ ಜಿಯೊ ಬಿಡೆನ್ ಜತೆ ಟ್ರಂಪ್ ಮೊದಲ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಟ್ರಂಪ್ ಅಮೆರಿಕದಲ್ಲಿ ಕೊರೋನಾ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಬಿಡೆನ್ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ ತೆಗೆದುಕೊಂಡ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಾ ಭಾರತದ ಹೆಸರನ್ನು ಪ್ರಸ್ತಾಪಿಸಿದ್ದಾರೆ