Saturday, April 17, 2021

ಚೀನಾದಲ್ಲಿ ಭಾರತದ ವೆಬ್’ಸೈಟ್, ದಿನಪತ್ರಿಕೆಗಳಿಗೆ ನಿಷೇಧ

ಬೀಜಿಂಗ್: ಚೀನಾದ 59 ಆಪ್’ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ ಜಿಂಗ್ ಪಿನ್ ನೇತೃತ್ವದ ಚೀನಾ ಸರ್ಕಾರ ಇದೀಗ ಭಾರತದ ವೆಬ್ ಸೈಟ್ (ವರ್ಚುವಲ್ ಪ್ರೈವೇಟ್ ನೆಟ್ ವರ್ಕ್) ಹಾಗೂ ದಿನಪತ್ರಿಕೆಗಳನ್ನು ಬ್ಲಾಕ್ ಮಾಡಿದೆ.
ಬೀಜಿಂಗ್’ನ ರಾಜತಾಂತ್ರಿಕ ಮೂಲಗಳ ಪ್ರಕಾರ, ಈವರೆಗೆ ಭಾರತದ ಟಿವಿ ಚಾನೆಲ್ ಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಈಗ ಕಳೆದ ಎರಡು ದಿನಗಳಿಂದ ಎಕ್ಸ್’ಪ್ರೆಸ್ ವಿಪಿಎನ್ ಐಫೋನ್ ಹಾಗೂ ಡೆಸ್ಕ್ ಟಾಪ್ ಗಳಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ಸೆನ್ಸಾರ್ ಶಿಪ್ ಮೂಲಕ ಕೆಲವು ವೆಬ್ ಸೈಟ್ ಬಳಸಲು ಅವಕಾಶ ಕಲ್ಪಿಸುವ ವಿಪಿಎನ್ ಗಳನ್ನು ಬ್ಲಾಕ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಫೈರ್ ವಾಲ್ ಅನ್ನು ಚೀನಾ ತಯಾರಿಸಿದೆ ಎಂದು ವರದಿ ವಿವರಿಸಿದೆ.
ಆನ್ ಲೈನ್ ಸೆನ್ಸಾರ್ ಶಿಪ್ ನಲ್ಲಿ ಚೀನಾ ಬಹಳ ಕುಖ್ಯಾತಿ ಪಡೆದಿದ್ದು, ಕ್ಸಿ ಜಿಂಗ್ ಪಿಂಗ್ ನೇತೃತ್ವದ ಸರ್ಕಾರ ಇಂತಹ ಕೆಲಸಗಳಲ್ಲಿ ಮಾಸ್ಟರ್ ಮೈಂಡ್ ಹೊಂದಿದೆ ಎಂದು ವರದಿ ಹೇಳಿದೆ. ಒಟ್ಟಾರೆ, ಭಾರತ, ಚೀನಾ ನಡುವಿನ ಗಡಿ ಸಂಘರ್ಷ ವಿಚಾರ ಇದೀಗ ತಾರಕಕ್ಕೇರತೊಡಗಿದೆ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!