ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಯುಎಸ್ ವಾಯುಪಡೆಯ ಕರ್ನಲ್ ರಾಜಾ ಜಾನ್ ವರ್ಪುತೂರ್ ಚಾರಿ ನೂತನ ನಾಸಾ ಪದವೀಧರರಾಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ, ಚಂದ್ರ ಮತ್ತು ಮಂಗಳ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಹೊಸ ಪದವೀಧರರಿಗೆ ಗಗನಯಾತ್ರಿ ಅಭ್ಯರ್ಥಿ ತರಬೇತಿಯಲ್ಲಿ ಬಾಹ್ಯಾಕಾಶ ವಾಕಿಂಗ್, ರೊಬೊಟಿಕ್ಸ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ವ್ಯವಸ್ಥೆಗಳು, ಟಿ-38 ಜೆಟ್ ಪ್ರಾವೀಣ್ಯತೆ ಮತ್ತು ರಷ್ಯಾದ ಭಾಷೆಯಲ್ಲಿ ಬೋಧನೆ, ಅಭ್ಯಾಸ ಮತ್ತು ಪರೀಕ್ಷೆಗಳಿರಲಿದೆ. ಆರಂಭಿಕ ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಈಗ ಮಿಷನ್ ನಿಯೋಜನೆಗೆ ಅರ್ಹರಾಗಿದ್ದಾರೆ.
ನಾಸಾ 2024 ರ ವೇಳೆಗೆ ಮೊದಲ ಮಹಿಳೆ ಮತ್ತು ಭವಿಷ್ಯದ ಪುರುಷ ಗಗನಯಾತ್ರಿಯನ್ನು ಚಂದ್ರನ ಮೇಲ್ಮೈಗೆ ಕಳುಹಿಸುತ್ತದೆ. ನಂತರ ವರ್ಷಕ್ಕೊಮ್ಮೆ ಹೆಚ್ಚುವರಿ ಚಂದ್ರ ಕಾರ್ಯಾಚರಣೆಗಳನ್ನು ಯೋಜಿಸಲಾಗಿದೆ ಮತ್ತು ಮಂಗಳ ಗ್ರಹದ ಮಾನವ ಪರಿಶೋಧನೆಯನ್ನು 2030 ರ ದಶಕದ ಮಧ್ಯಭಾಗದಲ್ಲಿ ಗುರಿಯಾಗಿಸಲಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಹೇಳಿದ್ದಾರೆ.
2020 ಅಮೆರಿಕದ ಮಣ್ಣಿನಿಂದ ಅಮೆರಿಕನ್ ಗಗನಯಾತ್ರಿಗಳನ್ನು ಅಮೆರಿಕನ್ ರಾಕೆಟ್ಗಳಲ್ಲಿ ಉಡಾವಣೆ ಮಾಡುವುದನ್ನು ನೋಡಲಿದೆ. ಇದು ನಮ್ಮ ಆರ್ಟೆಮಿಸ್ ಕಾರ್ಯಕ್ರಮ ಮತ್ತು ಚಂದ್ರ ಮತ್ತು ಅದಕ್ಕೂ ಮೀರಿದ ಕಾರ್ಯಗಳ ಪ್ರಗತಿಯ ಪ್ರಮುಖ ವರ್ಷವಾಗಿದೆ ಎಂದು ಜಿಮ್ ಬ್ರಿಡೆನ್ಸ್ಟೈನ್ ತಿಳಿಸಿದ್ದಾರೆ.
ನಾಸಾ ಮಿಷನ್ ಯೋಜನೆಗೆ ಇಂಡೋ ಅಮೆರಿಕನ್ ಚಾರಿ ಆಯ್ಕೆ
Follow Us