newsics.com
ಜಕಾರ್ತ: ಇಂಡೋನೇಷ್ಯಾ ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಅಂಗೀಕರಿಸಿದ್ದು, ದೇಶದಲ್ಲಿ ವಿವಾಹ ಪೂರ್ವ ಸೆಕ್ಸ್ ತಡೆಯುವ ಕಾನೂನಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಇಂಡೋನೇಷ್ಯಾ ಸರ್ಕಾರ ವಿವಾಹಪೂರ್ವ ಸೆಕ್ಸ್ ತಡೆಯಲು ಕಾನೂನು ರೂಪಿಸುತ್ತಿರುವುದಾಗಿ ಹೇಳಿ ಕರಡನ್ನು ಬಿಡುಗಡೆ ಮಾಡಿತ್ತು. ಈ ಕಾನೂನಿನ ಅನ್ವಯ ವಿವಾಹಕ್ಕೆ ಮುಂಚೆ ಸೆಕ್ಸ್ ಮಾಡಿದ್ರೆ, ಒಂದು ವರ್ಷ ಜೈಲು ಹಾಗೂ ಭಾರೀ ಮೊತ್ತದ ದಂಡ ವಿಧಿಸಬಹುದಾಗಿತ್ತು.
ಈ ಕಾನೂನು ವಿವಾಹಪೂರ್ವ ಲೈಂಗಿಕತೆ ಹಾಗೂ ಸಹಬಾಳ್ವೆಯನ್ನು ಕಾನೂನುಬಾಹಿರಗೊಳಿಸುತ್ತದೆ. ಜೊತೆಗೆ ಆಗ್ನೇಯ ಏಷ್ಯಾದಂತಹ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಬಹುದು. ಹೀಗಾಗಿ ಕಾನೂನನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಯುತ್ತಿವೆ.
ವ್ಯಾಪಕ ಪ್ರತಿಭಟನೆಗಳಿಂದಾಗಿ ಕಾನೂನು ರೂಪಿಸುವುದನ್ನು ಮುಂದೂಡಲಾಯಿತು. ಈ ಕಾನೂನು ಭಯದ ನಡುವೆ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದರು. ಪ್ರತಿಭಟನೆಯಲ್ಲಿ ಸುಮಾರು 300 ಮಂದಿ ಗಾಯಗೊಂಡಿದ್ದರು.