ವಾಷಿಂಗ್ಟನ್; ಇರಾಕ್ ನಲ್ಲಿರುವ ತಮ್ಮ ವಾಯಪಡೆಯ ಮೇಲೆ ನಡೆದ ಇರಾನ್ ನಡೆಸಿದ ಕ್ಷಿಪಣಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಆಲ್ ಈಸ್ ವೆಲ್’ ಎಂದಿದ್ದಾರೆ.
“ಸದ್ಯ ದಾಳಿಯಿಂದಾಗಿರುವ ಹಾನಿ ಹಾಗೂ ಯೋಧರ ಸಾವಿನ ಬಗ್ಗೆ ಪರಾಮರ್ಶಿಸಲಾಗುತ್ತಿದೆ. ಇಲ್ಲಿಯವರೆಗೆ ಅಂತಹ ಯಾವುದೇ ಹಾನಿಯಾಗಿಲ್ಲ. ದೇಶದ ಪ್ರತಿ ಮೂಲೆಯಲ್ಲಿಯೂ ನಮ್ಮದೇ ಆದ ಸಬಲ ಸೇನೆ ಸಿದ್ಧವಾಗಿದೆ. ಈ ಕುರಿತು ನಾಳೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.