ಟೆಹರಾನ್: ಅಮೆರಿಕ ವಿರುದ್ದದ ಕ್ಷಿಪಣಿ ದಾಳಿಯನ್ನು ಇರಾನ್ ತೀವ್ರಗೊಳಿಸಿದೆ. ಬಾಗ್ದಾದ್ ನ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಕ್ಷಿಪಣಿ ಹಸಿರು ವಲಯದ ಮೇಲೆ ಅಪ್ಪಳಿಸಿವೆ. ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಈ ಮಧ್ಯೆ ಯುದ್ದದ ಮಾತು ಹೇಳುತ್ತಿದ್ದ ಟ್ರಂಪ್ ಎಚ್ಚರಿಕೆಯ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇರಾನ್ ವಿರುದ್ದ ಕಠಿಣ ದಿಗ್ಬಂಧನ ವಿಧಿಸಿದ್ದಾರೆ.