Thursday, August 18, 2022

ಇನ್ಮುಂದೆ ಜಾಹೀರಾತುಗಳಲ್ಲಿ ಇರಾನಿ ಮಹಿಳೆಯರಿಗೆ ನಿರ್ಬಂಧ

Follow Us

newsics.com

ಟೆಹ್ರಾನ್: ಐಸ್‌ಕ್ರೀಂ ಕಂಪನಿಯ ಜಾಹೀರಾತೊಂದರಲ್ಲಿ ಮಹಿಳೆಯೊಬ್ಬಳು ಸಡಿಲವಾದ ಹಿಜಬ್ ಧರಿಸಿದ್ದೇ ಈಗ ಇರಾನ್‌ನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಇನ್ಮುಂದೆ ಇರಾನಿನ ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ.

ಐಸ್‌ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಹಿಳೆ ಸಡಿಲವಾದ ಹಿಜಬ್ ಧರಿಸಿದ್ದು ಇರಾನ್‌ನಾದ್ಯಂತ ಭಾರೀ ವಿವಾದ ಸೃಷ್ಟಿಸಿತು. ಈ ಜಾಹೀರಾತು ಇರಾನ್ ಧರ್ಮಗುರುಗಳನ್ನು ಕೆರಳಿಸಿತು. ಬಳಿಕ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಎಲ್ಲಾ ರೀತಿಯ ಜಾಹೀರಾತುಗಳಲ್ಲಿ ಮಹಿಳೆಯರನ್ನು ಪ್ರದರ್ಶಿಸುವುದನ್ನೇ ನಿಷೇಧಿಸುವಂತೆ ಮಾಡಿದೆ.

ಈ ಬಗ್ಗೆ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಕಲೆ ಮತ್ತು ಸಿನಿಮಾ ರಂಗಕ್ಕೆ ಪತ್ರ ಬರೆದಿದ್ದು, ಹಿಜಬ್ ಮತ್ತು ಪರಿಶುದ್ಧತೆಯ ನಿಯಮಗಳನ್ನು ಉಲ್ಲೇಖಿಸಿ, ಮಹಿಳೆಯರಿಗೆ ಇನ್ನು ಮುಂದೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ. ವಿವಾದಾತ್ಮಕ ಜಾಹೀರಾತನ್ನು ಪ್ರದರ್ಶಿಸಿದ ಸ್ಥಳೀಯ ಐಸ್ ಕ್ರೀಮ್ ತಯಾರಕ ಕಂಪನಿ ವಿರುದ್ಧ ಮೊಕದ್ದಮೆ ಹೂಡಬೇಕೆಂಬ ಒತ್ತಾಯ‌ ಕೇಳಿಬಂದಿದೆ.

ಪುತ್ರನ ಮೇಲೆ ಚಿರತೆ ದಾಳಿ ಸುದ್ದಿ ಕೇಳುತ್ತಲೇ ಹೃದಯಾಘಾತದಿಂದ ತಾಯಿ ನಿಧನ

ಭಾರತಕ್ಕೆ ಮತ್ತೊಂದು ಪದಕದ ಭರವಸೆ : ಸೆಮಿಫೈನಲ್​ ಪ್ರವೇಶಿಸಿದ ಸಾಕ್ಷಿ ಮಲಿಕ್​

ಚಪ್ಪಾಳೆ ತಟ್ಟುತ್ತಲೇ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ ಈ ವ್ಯಕ್ತಿ !

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!