Tuesday, April 13, 2021

ಉಚಿತ ವಿಮಾನ ಟೀಕೆಟ್ ಗೆ ಇಸ್ರೇಲಿಗಳೂ ಅರ್ಹರು ಎಂದ ಕತಾರ್

ಕತಾರ್: ವಿಶ್ವದ ಎಲ್ಲೆಡೆ ಕೊರೋನಾ ವಿರುದ್ದ ಹೋರಾಟ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲು ಕತಾರ್ ಏರ್ ವೇಸ್ ಒಂದು ಲಕ್ಷ ಉಚಿತ ಟೀಕೆಟ್ ಘೋಷಣೆ ಮಾಡಿದೆ. ಆದರೆ ಇದು ಕತಾರ್ ನ ಬದ್ದ ಶತ್ರು ದೇಶವಾಗಿರುವ ಇಸ್ರೇಲ್ ಗೂ ಅನ್ವಯವಾಗಲಿದೆಯೇ ಎಂಬ ಪ್ರಶ್ನೆ ತಲೆದೋರಿತ್ತು. ಇದೀಗ ಕತಾರ್ ಏರ್ ವೇಸ್ ಸಿಇಒ ಅಕ್ಬರ್ ಅಲ್ ಬಕ್, ಆರೋಗ್ಯದ ವಿಷಯದಲ್ಲಿ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಶ್ವದ ಎಲ್ಲ ನಾಗರಿಕರಿಗೂ ಇದು ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಪ್ಯಾಲೇಸ್ತೀನ್ ಸರ್ಕಾರಕ್ಕೆ ಕತಾರ್ ಭಾರಿ ಆರ್ಥಿಕ ಬೆಂಬಲ  ನೀಡುತ್ತಿದೆ. ಕತಾರ್ ನಿಂದ ಇಸ್ರೇಲ್ ಗೆ ಯಾವುದೇ ವಿಮಾನ ತೆರಳುತ್ತಿಲ್ಲ. ಇಸ್ರೇಲ್ ನ್ನು ಬಲವಾಗಿ ವಿರೋಧಿಸುತ್ತಿರುವ ರಾಷ್ಟ್ರಗಳಲ್ಲಿ ಕತಾರ್ ಮುಂಚೂಣಿಯಲ್ಲಿದೆ. ಮೇ 12ರಿಂದ 18ರ ವರೆಗೆ ಉಚಿತ ಟೀಕೆಟ್ ಗೆ ನೋಂದಾಯಿಸಿಕೊಳ್ಳುವಂತೆ ಕತಾರ್ ಮನವಿ ಮಾಡಿದೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!