NEWSICS.COM
ಚೆನ್ನೈ: ಇಸ್ರೋದ ಮಹತ್ವಾಕಾಂಕ್ಷೆಯ ಮಾನವ ಸಹಿತ ‘ಯಗಗನಯಾನ ಯೋಜನೆಗೆ ಹಸಿರು ಇಂಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶಿವನ್ ಶನಿವಾರ(ಡಿ.26) ಹೇಳಿದ್ದಾರೆ.
ಸಾಮಾನ್ಯವಾಗಿ ರಾಕೆಟ್ಗಳಲ್ಲಿ ಹೈಡ್ರೊಜೀನ್ ರಾಕೆಟ್ ಇಂಧನವನ್ನು ಬಳಸಲಾಗುತ್ತದೆ. ಇದು ವಿಷಕಾರಿಯಾಗಿದ್ದು, ಕ್ಯಾನ್ಸರ್ಗೂ ಕಾರಣವಾಗುತ್ತದೆ. ಈ ಇಂಧನದ ಬದಲಾಗಿ ಇದೀಗ ಪರಿಸರ ಸ್ನೇಹಿ ಇಂಧನದ ಅಭಿವೃದ್ಧಿಗೆ ಇಸ್ರೊ ಮುಂದಾಗಿದೆ. ಹಸಿರು ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಕಡಿಮೆಗೊಳಿಸುವುದಕ್ಕೂ ನಾವು ಗಮನಹರಿಸಬೇಕು ಎಂದು ಹೇಳಿದ್ದಾರೆ.
ಶಿವನ್ ಎಸ್’ಆರ್’ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ 16ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.