ವಾಷಿಂಗ್ಟನ್: ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದರೂ ಪರವಾಗಿಲ್ಲ, ಮಕ್ಕಳು ಶಾಲೆಗೆ ಹೋಗಲೇಬೇಕು…
ಇಂತಹದೊಂದು ಅಚ್ಚರಿಯ ಹೇಳಿಕೆ ನೀಡಿದವರು ಅಮೆರಿಕದ ಅಧ್ಯಕ್ಷೀಯ ಕಚೇರಿ ಮತ್ತು ನಿವಾಸ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕೆನಾನಿ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಸೋಂಕು ಹರಡಿದರೂ ಸರಿಯೇ, ಮಕ್ಕಳು ಶಾಲೆಗೆ ಹೋಗಬೇಕು ಎಂದು ನಾವು ನಂಬಿದ್ದೇವೆ. ಯಾಕೆಂದರೆ, ಶಾಲೆಗಳಿಂದ ಹೊರಗಿರುವುದು ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಲಿದೆ. ಇದು ವೈಜ್ಞಾನಿಕ ಸತ್ಯ ಎಂದು ಅಭಿಪ್ರಾಯಪಟ್ಟರು.
ಬರುವ ನವೆಂಬರ್’ನಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಶಾಲೆಗಳನ್ನು ಆರಂಭಿಸಲು ಟ್ರಂಪ್ ಸರ್ಕಾರ ಯತ್ನಿಸುತ್ತಿದೆ. ಕೊರೋನಾ ವೈರಸ್ ದೇಶವನ್ನು ಆಕ್ರಮಿಸಲು ಆರಂಭಿಸುತ್ತಿದ್ದಾಗ ಹಠಾತ್ತನೆ ಮುಚ್ಚಿದ್ದ ಶಾಲೆಗಳನ್ನು ಈಗ ಶಾಲೆಗಳ ಪುನಾರಂಭಿಸಲು ಅಧ್ಯಕ್ಷ ಟ್ರಂಪ್ ಇನ್ನಿಲ್ಲದ ರೀತಿಯಲ್ಲಿ ಅತ್ಯಾಸಕ್ತಿ ತೋರುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಕೊರೋನಾ ಇನ್ನೂ ತಹಬಂದಿಗೆ ಬರದಿರುವ ಸಮಯದಲ್ಲಿ ಶಾಲೆ ಆರಂಭವಾದರೆ ಮಕ್ಕಳು ಮಾರಕ ಕೊರೋನ ವೈರಸ್ ರೋಗದ ಸೋಂಕಿಗೆ ಒಳಗಾಗಬಹುದು ಎಂಬ ಕಳವಳವನ್ನು ಶಿಕ್ಷಕರು ಮತ್ತು ಹೆತ್ತವರು ಹೊಂದಿರುವುದರ ಹೊರತಾಗಿಯೂ ಟ್ರಂಪ್ ತನ್ನ ನಿರ್ಧಾರದಲ್ಲಿ ದೃಢತೆ ಹೊಂದಿದ್ದಾರೆ. ಶಾಲೆಗಳು ಆರಂಭವಾದರೆ, ದೇಶದಲ್ಲಿ ಸಾಮಾನ್ಯ ಪರಿಸ್ಥಿತಿ ಇದೆ ಎಂದು ಬಿಂಬಿಸಿಕೊಳ್ಳುವುದು ಟ್ರಂಪ್ರ ಉದ್ದೇಶವಾಗಿದೆ ಎನ್ನಲಾಗಿದೆ.
ಕೊರೋನಾ ಹೆಚ್ಚಿದರೂ ಪರವಾಗಿಲ್ಲ, ಮಕ್ಕಳು ಶಾಲೆಗೆ ಹೋಗಲಿ…
Follow Us