NEWSICS.COM
ಜಪಾನ್: ಜಪಾನ್ನ ಆರೋಗ್ಯ ಸಚಿವಾಲಯ ಬ್ರಿಟನ್ನಲ್ಲಿ ಗುರುತಿಸಲ್ಪಟ್ಟ ಹೊಸ ಕರೋನವೈರಸ್ನ ಸೋಂಕು ಪತ್ತೆಯಾಗಿದೆ ಎಂದು ದೃಢಪಡಿಸಿದೆ.
ಈ ಮೂಲಕ ಜಪಾನ್ ನಲ್ಲಿ ರೂಪಾಂತರಗೊಂಡ ಕೊರೋನಾ ಸೋಂಕಿನ ಪ್ರಕರಣ ದಾಖಲಾಗಿದೆ.
ಡಿ.18-21ರವರೆಗೆ ಬ್ರಿಟನ್ ನಿಂದ ಆಗಮಿಸಿದ ಐವರು ಪ್ರಯಾಣಿಕರ ಪೈಕಿ 60ವರ್ಷದ ವ್ಯಕ್ತಿಯಲ್ಲಿ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆಗ ಸೋಂಕು ಪತ್ತೆಯಾಗಿದೆ. ನಂತರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷನ್ ಸಂಸ್ಥೆ ಹೆಚ್ಚಿನ ವಿಶ್ಲೇಷಣೆ ನಡೆಸಿ ರೂಪಾಂತರಗೊಂಡ ಹೊಸ ಕೊರೋನಾ ಎಂದು ಖಚಿತಪಡಿಸಿದೆ. ಜಪಾನ್ ಗೆ ಬಂದ ಇತರೆ ನಾಲ್ವರಲ್ಲೂ ಸೋಂಕು ಪತ್ತೆಯಾಗಿದ್ದು, ಈ ನಾಲ್ವರೂ ರೋಗ ಲಕ್ಷಣ ರಹಿತರಾಗಿದ್ದಾರೆ ಎಂದು ಸರ್ಕಾರ ಹೇಳಿದೆ. ಈ ಸೋಂಕು ಶೇಕಡಾ 70 ರಷ್ಟು ಹೆಚ್ಚು ಹರಡಬಲ್ಲದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಪಾನ್ ಆರೋಗ್ಯ ಸಚಿವ ನೊರಿಹಿಸಾ ತಮುರಾ ತಿಳಿಸಿದ್ದಾರೆ.