newsics.com
ಜಪಾನ್ : ಕೊರೋನಾ ಕಾರಣದಿಂದ ಸಂಬಂಧಿಕರನ್ನು ಭೇಟಿಯಾಗುವುದೇ ಕಷ್ಟವಾಗಿದೆ. ಹೀಗಾಗಿ ಜಪಾನ್ ನಲ್ಲಿ ಒಂದು ವಿನೂತನ ಪ್ರಯೋಗ ಮಾಡಲಾಗಿದೆ.
ಮಗು ಹುಟ್ಟಿದಾಗ ಅದರ ತೂಕದಷ್ಟು ಕೆಜಿಯ ಅಕ್ಕಿಯನ್ನು ಭೇಟಿಯಾಗಲು ಸಾಧ್ಯವಾಗದ ಸಂಬಂಧಿಕರ ಮನೆಗೆ ಕಳುಹಿಸಲಾಗುತ್ತಿದೆ.
ಮಗು ಹೊದಿಕೆಯಿಂದ ಸುತ್ತಿಕೊಂಡ ರೀತಿಯಲ್ಲಿ ಅಥವಾ ವಿವಿಧ ವಿನ್ಯಾಸಗಳ ಫೋಟೊ ಹಾಕಿ ಚೀಲವನ್ನು ರೂಪಿಸಿ ಅದರಲ್ಲಿ ಅಕ್ಕಿ ತುಂಬಿಸಿ ನೀಡಲಾಗುತ್ತಿದೆ. ಇದರಿಂದ ಸಂಕಷ್ಟದಲ್ಲಿರುವವರಿಗೆ ಆಹಾರವೂ ಸಿಕ್ಕಂತಾಗಿ, ಹೊಸದಾಗಿ ಕುಟುಂಬ ಸೇರಿದ ಮಗುವನ್ನು ಪರಿಚಯಿಸಿದಂತಾಗುತ್ತದೆ.
ಕೋಮೆ ನೋ ಜೊಟೊ ಯೋಶಿಮಿಯಾ ಎನ್ನುವ ಅಕ್ಕಿ ಅಂಗಡಿಯ ಮಾಲೀಕರು ಇದನ್ನು ಆರಂಭಿಸಿದ್ದು ದೂರದಲ್ಲಿರುವ ಸಂಬಂಧಿಗಳನ್ನು ಭೇಟಿಯಾಗಲು ಸಾಧ್ಯವಾಗದಿದ್ದಾಗ ಬಾಂಧವ್ಯ ಉಳಿಸಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ.
ಇಲ್ಲಿ ಮಗು ಹುಟ್ಟಿದಾಗ ಸಂಬಂಧಿಕರಿಗೆ ಅಕ್ಕಿ ಕಳುಹಿಸಿ ಸಂಭ್ರಮಿಸುತ್ತಾರೆ !
Follow Us