newsics.com
ಅಟ್ಲಾಂಟಿಕ್: ಜಾಸ್ಮಿನ್ ಹ್ಯಾರಿಸನ್ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್ ಸಾಗರವನ್ನು ಪರ್ಯಟನೆ ಮಾಡಿದ್ದಾಳೆ.
ಈ ಏಕಾಂಗಿ ಯಾನ ಪೂರ್ಣಗೊಳಿಸಲು ಜಾಸ್ಮಿನ್ 70 ದಿನಗಳನ್ನು ತೆಗೆದುಕೊಂಡಿದ್ದಾಳೆ. 2 ಗಂಟೆಗಳ ಕಾಲ ಸಾಗರ ಸುತ್ತಿ ಇನ್ನೆರಡು ಗಂಟೆ ನಿದ್ದೆ ಮಾಡುವ ಮೂಲಕ ಈಕೆ ಸಮುದ್ರ ಯಾನ ಮಾಡಿದ್ದಾಳೆ.
ಈ ಸಮಯದಲ್ಲಿ ಈಕೆ ಎಲ್ಲರೊಂದಿಗೂ ಸಂಪರ್ಕವನ್ನು ಕಡಿದುಕೊಂಡಿದ್ದಳು. ಸ್ಯಾಟ್ಲೈಟ್ ಫೋನ್ ಮೂಲಕ ತಾಯಿಗೆ ನಿತ್ಯ ಕರೆ ಮಾಡುತ್ತಿದ್ದಳು ಎನ್ನಲಾಗಿದೆ.
70 ದಿನಗಳ ಅವಧಿಯಲ್ಲಿ ಜಾಸ್ಮಿನ್ ಬರೋಬ್ಬರಿ 3000 ಮೈಲಿ ಕ್ರಮಿಸಿದ್ದಾಳೆ. ಸಾಮಾನ್ಯವಾಗಿ ಇಂತಹ ಪ್ರಯಾಣದ ವೇಳೆ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯುತ್ತಾಳೆ. ಆದರೆ ಈಕೆ ಈ ಪ್ರಯಾಣ ಅವಧಿಯಲ್ಲಿ 40 ಕೆಜಿ ಚಾಕಲೇಟ್ ಹಾಗೂ ಬಿಸ್ಕಟ್ಗಳನ್ನು ತಿಂದಿದ್ದಾಳೆ.