Wednesday, October 5, 2022

ಅರಿಜೋನಾ, ಜಾರ್ಜಿಯಾದಲ್ಲಿ ಜೋ ಬೈಡನ್ ಗೆ ಜಯ

Follow Us

Newsics.com

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಡೆಮಾಕ್ರಟ್ ಅಭ್ಯರ್ಥಿ ಜೊ ಬೈಡನ್ ಅರಿಜೋನಾ ಮತ್ತು  ಜಾರ್ಜಿಯಾದಲ್ಲಿ ಕೂಡ ಗೆಲುವು ದಾಖಲಿಸಿದ್ದಾರೆ. ಜಾರ್ಜಿಯಾ ರಿಪಬ್ಲಿಕನ್ ಪಕ್ಷದ ಭದ್ರ ನೆಲೆ ಎಂದು ಪರಿಗಣಿಸಲಾಗಿತ್ತು.ಈ  ಎರಡೂ  ಪ್ರಾಂತ್ಯಗಳಲ್ಲಿ ನ ಜಯದೊಂದಿಗೆ ಬಿಡೆನ್ ಅವರ ಮತ 306ಕ್ಕೆ ಏರಿದೆ.

ಇದೇ ವೇಳೆ ಬಿಡೆನ್ ಚುನಾವಣೆಯಲ್ಲಿ ಜಯಗಳಿಸಿರುವುದನ್ನು ಅಂಗೀಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಲೂ ನಿರಾಕರಿಸಿದ್ದಾರೆ. ಗೆಲುವು ನನ್ನದ್ದೇ ಎಂದು ಪುನರುಚ್ಚರಿಸಿದ್ದಾರೆ.

ಈ ಮಧ್ಯೆ ಏಪ್ರಿಲ್ ತಿಂಗಳಲ್ಲಿ ಅಮೆರಿಕದ ಎಲ್ಲರಿಗೂ ಕೊರೋನಾ ತ಼ಡೆ ಲಸಿಕೆ ದೊರೆಯಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ತಯಾರಿ ಭರದಿಂದ ಸಾಗಿದೆ ಎಂದು ಅವರು ಹೇಳಿದ್ದಾರೆ. ಕೊರೋನಾ ನಿಯಂತ್ರಿಸಲು ವಿಫಲವಾಗಿರುವುದೇ ಟ್ರಂಪ್ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!