Wednesday, October 5, 2022

ವಕೀಲಿ ವೃತ್ತಿಗೆ ವಿದಾಯ ಹೇಳಲಿದ್ದಾರೆ ಕಮಲಾ ಹ್ಯಾರಿಸ್ ಪತಿ!

Follow Us

newsics.com
ವಾಷಿಂಗ್ಟನ್: ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ಲಾಸ್ ಎಮ್ಹಾಫ್ ತಮ್ಮ ವೃತ್ತಿಗೆ ವಿದಾಯ ಹೇಳಿದ್ದಾರೆ.
ಪತ್ನಿಯ ರಾಜಕೀಯ ಜೀವನಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತಮ್ಮ ಉದ್ಯೋಗ ತ್ಯಜಿಸಲಿದ್ದಾರೆ. ಅತಿ ದೊಡ್ಡ ಕಾನೂನು ಸಂಸ್ಥೆಗಳಲ್ಲಿ ಒಂದಾದ ದಕ್ಷಿಣ ಕ್ಯಾಲಿಫೋರ್ನಿಯಾದ ಡಿಎಲ್‌ಎ ಪೈಪರ್‌ನಲ್ಲಿ ವಕೀಲರಾಗಿರುವ ಅವರು, ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸುವ ದಿನದಂದೇ ವೃತ್ತಿಗೆ ವಿದಾಯ ಹೇಳಲಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಚಟುವಟಿಕೆಗಳು ಆರಂಭವಾದಾಗ ಆಗಸ್ಟ್‌ನಲ್ಲಿ ಕಮಲಾ ಪರ ಪ್ರಚಾರ ನಡೆಸಲು ರಜೆ ತೆಗೆದುಕೊಂಡಿದ್ದ ಎಮ್ಹಾಫ್, 2021ರ ಜನವರಿ 20ರಿಂದ ಸಂಸ್ಥೆಯೊಡೆಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲಿದ್ದಾರೆ.
ವೆನೇಬಲ್ ಎಲ್‌ಎಲ್‌ಪಿ ಕಾನೂನು ಸಂಸ್ಥೆಯಿಂದ ಡಿಎಲ್‌ಎ ಪೈಪರ್ ಸಂಸ್ಥೆಗೆ 2017ರಲ್ಲಿ ಸೇರಿಕೊಂಡಿದ್ದರು.
ನೂತನ ಅಧ್ಯಕ್ಷ ಜೋ ಬೈಡನ್ ಅವರೊಂದಿಗೂ ಆಪ್ತ ಸಂಬಂಧ ಹೊಂದಿರುವ ಎಮ್ಹಾಫ್, ಚುನಾವಣೆಯಲ್ಲಿ ಬೈಡನ್ ಮತ್ತು ಕಮಲಾ ಪರ ಅವರು ನಿರಂತರ ಪ್ರಚಾರ ನಡೆಸಿದ್ದರು. ಕಮಲಾ ಮತ್ತು ಎಮ್ಹಾಫ್ 2013ರಲ್ಲಿ ಮೊದಲು ಭೇಟಿಯಾಗಿದ್ದರು. 2014ರಲ್ಲಿ ಮದುವೆಯಾಗಿದ್ದರು. ಆಗ ಕಮಲಾ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು. ಕಮಲಾ ಅವರಿಗೆ ಮೊದಲ ಮದುವೆಯಾದರೆ, ಎಮ್ಹಾಫ್ ಅವರಿಗೆ ಇದು ಎರಡನೆಯ ಮದುವೆ.

ಡಿಗೊ ಮರಡೋನಾ ಆರೋಗ್ಯ ಸ್ಥಿರ

ಪುಲ್ವಾಮಾ ಅಷ್ಟೇ ಅಲ್ಲ, ಮುಂಬೈ ಸ್ಪೋಟದಲ್ಲೂ ನಮ್ಮದೇ ಪಾತ್ರ ಎಂದ ಪಾಕ್

ಸ್ಪುಟ್ನಿಕ್ -ವಿ ಲಸಿಕೆ ಶೇ.92ರಷ್ಟು ಯಶಸ್ವಿ- ರಷ್ಯಾ ಸಂಸ್ಥೆ

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!