Sunday, June 13, 2021

ಕೇರಳ ಪ್ರವಾಸಿಗರ ಸಾವು; ರೆಸಾರ್ಟ್ ಬಂದ್ ಮಾಡಿಸಿದ ನೇಪಾಳ ಸರ್ಕಾರ

ಕಠ್ಮಂಡು: ಪ್ರವಾಸಕ್ಕೆ ತೆರಳಿದ್ದ 8 ಭಾರತೀಯರು ಉಸಿರುಗಟ್ಟಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಎವರೆಸ್ಟ್ ಪನೋರಮಾ ರೆಸಾರ್ಟ್’ ಪರವಾನಗಿಯನ್ನು ರದ್ದುಗೊಳಿಸಿರುವ ನೇಪಾಳ ಸರ್ಕಾರ, ರೆಸಾರ್ಟ್ ಬಂದ್ ಮಾಡಿಸಿದೆ.
ಘಟನೆ ನಡೆದ ಮೂರು ತಿಂಗಳ ಬಳಿಕ ಸಮಿತಿ ನೇಪಾಳ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಪರಿಶೀಲಿಸುವ ನೇಪಾಳ ರಾಜ್ಯ ಪ್ರವಾಸೋದ್ಯಮ ಇಲಾಖೆ, ದಮನ್ ಮೂಲದ ಎವರೆಸ್ಟ್ ಪನೋರಮಾ ರೆಸಾರ್ಟ್’ನ್ನು ಬಂದ್ ಮಾಡಿಸಿದೆ.
ಕಳಪೆ ನಿರ್ವಹಣೆಯಿಂದಾಗಿ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 8 ಮಂದಿ ರೆಸಾರ್ಟ್ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಭಾರತೀಯರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಜಿಂಕೆ ರಸ್ತೆ ದಾಟುವ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರ

newsics.com ಮುಂಬೈ: ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ಸಾಮಾಜಿಕ ಜಾಲತಾಣದಲ್ಲಿ ಜಿಂಕೆಯೊಂದು ಮುಂಬೈನ ರಸ್ತೆ ದಾಟುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಮುಂಬೈನ ಕಂದಿವಾಲಿ ಬಳಿ ಜಿಂಕೆ ರಸ್ತೆ...

ಜಮ್ಮುವಿನಲ್ಲಿ ತಿರುಪತಿ ವೆಂಕಟೇಶ್ವರ ಮಾದರಿ ದೇವಸ್ಥಾನಕ್ಕೆ ಭೂಮಿಪೂಜೆ

newsics.com ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮುವಿನಲ್ಲಿ ತಿರುಪತಿ ತಿರುಮಲ ದೇವಸ್ಥಾನ ನಿರ್ಮಿಸಲು ಉದ್ದೇಶಿಸಿರುವ ಭವ್ಯ ವೆಂಕಟೇಶ್ವರ ದೇವಸ್ಥಾನದ ಭೂಮಿಪೂಜೆ ಕಾರ್ಯಕ್ರಮ ಇಂದು(ಜೂ.13) ನಡೆಯಿತು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಅಧ್ಯಕ್ಷ...

ಉತ್ತರಾಖಂಡ್ ಪ್ರತಿಪಕ್ಷ ನಾಯಕಿ ಇಂದಿರಾ ಇನ್ನಿಲ್ಲ

newsics.com ನವದೆಹಲಿ: ಉತ್ತರಾಖಂಡ್ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕಿಯಾಗಿದ್ದ ಇಂದಿರಾ ಹೃದಯೇಶ್  ನಿಧನಹೊಂದಿದ್ದಾರೆ. ದೆಹಲಿಯಲ್ಲಿ ಅವರು ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ದೆಹಲಿಯ ಉತ್ತರಾಖಂಡ್ ಸದನದಲ್ಲಿ ವಾಸ್ತವ್ಯ ಹೂಡಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ.ಕಾಂಗ್ರೆಸ್...
- Advertisement -
error: Content is protected !!