newsics.com
ಟೋಕಿಯೋ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಯಾವುದೇ ಷರತ್ತುಗಳಿಲ್ಲದೆ ಭೇಟಿಯಾಗಲು ಸಿದ್ಧ ಎಂದು ಜಪಾನ್ನ ನೂತನ ಪ್ರಧಾನಿ ಯೋಶಿಹಿದೆ ಸುಗಾ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜಪಾನ್ ಮತ್ತು ಉತ್ತರ ಕೊರಿಯಾ ನಡುವಿನ ರಚನಾತ್ಮಕ ಸಂಬಂಧ ಎರಡೂ ಕಡೆಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಸುಗಾ ಅಭಿಪ್ರಾಯಪಟ್ಟಿದ್ದಾರೆ.
ಕರುಳಿನ ಕ್ಯಾನ್ಸರ್ ಹಿನ್ನೆಲೆ ಆಗಸ್ಟ್ನಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕೃಷಿಕನ ಮಗ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದರು. ಸುಗಾ ಈಗಾಗಲೇ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ರೀತಿಯ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಯೊಶೋಹಿದೆ ಸುಗಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಜಪಾನ್ ನ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ಸುಗಾ ಅವರನ್ನು ಅಭಿನಂದಿಸಿದ್ದಾರೆ.
ಕೊರೋನಾ ನಿರ್ಲಕ್ಷಿಸಿದರೆ 20 ಲಕ್ಷ ಜನ ಬಲಿ; WHO ಎಚ್ಚರಿಕೆ
ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಪಾಕ್ ವ್ಯಕ್ತಿ
ವಿಶ್ವಸಂಸ್ಥೆಯ ನಿರ್ಧಾರಕ ರಚನೆಗಳಿಂದ ಭಾರತವನ್ನು ಎಷ್ಟು ದಿನ ದೂರ ಇಡ್ತೀರಿ? ಮೋದಿ ಪ್ರಶ್ನೆ