newsics.com
ದುಬೈ: ಕುವೈತ್‌ನ ಆಡಳಿತಗಾರ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ (91) ಮಂಗಳವಾರ ನಿಧನರಾದರು.
ಇವರ ನಿಧಾನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಭಾರತ ತನ್ನ ಆತ್ಮೀಯ ಮಿತ್ರನನ್ನು ಕಳೆದುಕೊಂಡಿದೆ. ಅವರು ಕುವೈತ್ ನಲ್ಲಿರುವ ಭಾರತೀಯರ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ನಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರು ಎಂದಿದ್ದಾರೆ.
2006ರಲ್ಲಿ ಶೇಖ್ ಸಬಾಹ್ ಅಧಿಕಾರಕ್ಕೆ ಬಂದಿದ್ದ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ತಮ್ಮ ದಶಕಗಳ ಆಡಳಿತದಲ್ಲಿ ಮಧ್ಯಪ್ರಾಚ್ಯ ಭಾಗದಲ್ಲಿ ಅನೇಕ ಮಹತ್ವದ ಕಾರ್ಯಗಳ ನೇತೃತ್ವ ವಹಿಸಿದ್ದರು. 1990ರ ಗಲ್ಫ್ ಯುದ್ಧದ ಬಳಿಕ ಅವರು ಇರಾಕ್ ಜತೆಗಿನ ಸಂಬಂಧ ವೃದ್ಧಿಸುವುದರಲ್ಲಿ ಮತ್ತು ಇತರೆ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಪ್ರಮುಖ ರಾಜತಾಂತ್ರಿಕ ಕಾರ್ಯ ನಿರ್ವಹಿಸಿದ್ದರು.
ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅವರ ಪೂರ್ವಾಧಿಕಾರಿ ಶೇಖ್ ಸಾದ್ ಅಲ್ ಅಬ್ದುಲ್ಲಾ ಅಲ್ ಸಬಾಹ್ ಅವರನ್ನು ಕೇವಲ ಒಂಬತ್ತು ದಿನಗಳ ಅಡಳಿತದ ಬಳಿಕ ಸಂಸತ್ತು ಸರ್ವಾನುಮತದಿಂದ ಕೆಳಕ್ಕಿಳಿಸಿತ್ತು. ಬಳಿಕ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅಧಿಕಾರಕ್ಕೇರಿದ್ದರು.
ವಿಕ್ರಮ ಬೇತಾಳ ಕಲಾವಿದ ಇನ್ನಿಲ್ಲ