newsics.com
ಕೊಲಂಬಿಯಾ: ಭಾರೀ ಮಳೆಯಿಂದ ಕೊಲಂಬಿಯಾದಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣು ಬಸ್ ನ ಮೇಲೆ ಬಿದ್ದ ಪರಿಣಾಮ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ನ ಮೇಲೆ ದಿಢೀರನೆ ಮಣ್ಣು ಜರಿದು ಬಿದ್ದಿದೆ.
ಸೆಂಟ್ರಲ್ ಕೊಲಂಬಿಯಾದ ರಿಸಾಲಾರ್ಡ ಜಿಲ್ಲೆಯ ಪ್ಯೂಬ್ಲೋ ರಿಕೋ ನಗರದಲ್ಲಿ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇತರ ವಾಹನಗಳ ಮೇಲೆ ಕೂಡ ಮಣ್ಣು ಕುಸಿದು ಬಿದ್ದ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಕಳೆದ ಒಂದು ವಾರದಿಂದ ಕೊಲಂಬಿಯಾದಲ್ಲಿ ವ್ಯಾಪಕ ಮಳೆಯಾಗುತ್ತಿದೆ