ಕಾಠ್ಮಂಡು: ನೇಪಾಳದಲ್ಲಿ ಜಡಿಮಳೆ ಮುಂದುವರಿದಿದ್ದು, ಭಾರೀ ಭೂ ಕುಸಿತ ಸಂಭವಿಸಿದೆ. ನೇಪಾಳದ ಸಿಂಧುಪಾಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಗುಡ್ಡದಿಂದ ಮಣ್ಣು ಜರಿದು ಬಿದ್ದ ಪರಿಣಾಮ 18 ಮನೆಗಳು ನೆಲಸಮವಾಗಿವೆ.
ಈ ದುರಂತದಲ್ಲಿ 12 ಮಂದಿ ನಾಪತ್ತೆಯಾಗಿದ್ದಾರೆ.
ಭೂ ಕುಸಿತದಲ್ಲಿ ನಾಪತ್ತೆಯಾಗಿರುವ 12 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಳೆದ ತಿಂಗಳು ಕೂಡ ಇದೇ ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿತ್ತು. ಆ ದುರಂತದಲ್ಲಿ 21ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು