ಕಟ್ಮಂಡು: ನೇಪಾಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಭಾರತೀಯ ಸೇರಿ 10 ಮಂದಿ ಮೃತಪಟ್ಟಿದ್ದಾರೆ.
ನೇಪಾಳದ ಸಿಂಧುಪಾಲ್ ಚೌಕ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಬ್ರಿಜುಂಗ್ ಮೆಟ್ರೊಪೊಲೀಸ್ ಬಳಿಯ ನಿವಾಸಿಗಳಾದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೂಕುಸಿತ ಸಂಭವಿಸಿದ ವೇಳೆ ಶಿಬಿರದ ಒಳಗೆ ಇವರೆಲ್ಲಾ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚೀನಾದ ಗಡಿ ಭಾಗವಾದ ಮೆಲಾಮಿಚಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ 8 ಮಂದಿ ಮೃತಪಟ್ಟಿದ್ದರು.
ನೇಪಾಳದಲ್ಲಿ ಭೂಕುಸಿತ; ಓರ್ವ ಭಾರತೀಯ ಸೇರಿ 10 ಮಂದಿ ಸಾವು
Follow Us