newsics.com
ವಾಷಿಂಗ್ಟನ್: ಪ್ರತಿಷ್ಠಿತ ನೈಕ್ಸ್ ಜೋರ್ಡಾನ್ ಬ್ರಾಂಡ್ ನ ಅಧ್ಯಕ್ಷರಾಗಿರುವ ಲ್ಯಾರಿ ಮಿಲ್ಲರ್ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. 56 ವರ್ಷಗಳ ಹಿಂದೆ 18ರ ಹರೆಯದ ಯುವಕನೊಬ್ಬನ ಹತ್ಯೆ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ.
ಪಶ್ಚಿಮ ಫಿಲಾಡೆಲ್ಪಿಯಾದಲ್ಲಿ 56 ವರ್ಷಗಳ ಹಿಂದೆ ಎಡ್ವರ್ಡ್ ವೈಟ್ ಎಂಬ ಯುವಕನ ಹತ್ಯೆ ಮಾಡಿದ್ದೆ. ಜನರಿಗೆ ಇದರ ಬಗ್ಗೆ ತಿಳಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಿದ್ದೆ. ಇದನ್ನು ಮುಚ್ಚಿಡುವ ಯತ್ನ ಕೂಡ ನಡೆಸಿದ್ದೆ ಎಂದು ಲ್ಯಾರಿ ಮಿಲ್ಲರ್ ಹೇಳಿದ್ದಾರೆ.
ಕೊಲೆ ಕೃತ್ಯಕ್ಕಾಗಿ ಲ್ಯಾರಿ ಮಿಲ್ಲರ್ ಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.