Saturday, November 27, 2021

ಕೇರಳಕ್ಕೆ ಮರಳಲಾರದೆ ದುಬೈನಲ್ಲೇ ನಿವೃತ್ತ ಪ್ರೊಫೆಸರ್ ಸಾವು

Follow Us

ಯುಎಇ(ದುಬೈ): ಮಗಳನ್ನು ಭೇಟಿಯಾಗಲು ಯುಎಇಗೆ ತೆರಳಿದ್ದ ಕೇರಳದ ನಿವೃತ್ತ ಪ್ರೊಫೆಸರ್ ಲಾಕ್ ಡೌನ್ ನಿಂದಾಗಿ ಅಲ್ಲಿಂದ ಹಿಂದಿರುಗಲಾಗದೆ ಅಲ್ಲಿಯೇ ಹೃದಯಾಘಾತದಿಂದ ಶನಿವಾರ ಅಸುನೀಗಿದ್ದಾರೆ.
ಶಾರ್ಜಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಗಳು ಶ್ರೀಜಾಳನ್ನು ಭೇಟಿಯಾಗಲು ಕೇರಳದಿಂದ ಎಂ.ಶ್ರೀಕುಮಾರ್(70) ಮತ್ತು ಪತ್ನಿ ಶ್ರೀಕುಮಾರಿ ದುಬೈಗೆ ತೆರಳಿದ್ದರು. ಅವರು ನಿಗದಿಯಂತೆ ಶನಿವಾರ ಕೇರಳಕ್ಕೆ ವಾಪಸ್ ಆಗಬೇಕಾಗಿತ್ತು. ಆದರೆ ಎಲ್ಲಾ ವಿಮಾನ ಸಂಚಾರ ರದ್ದುಗೊಳಿಸಿದ್ದರಿಂದ ಅವರಿಗೆ ದುಬೈನಿಂದ ಕೇರಳಕ್ಕೆ ವಾಪಸ್ ಆಗಲು ಸಾಧ್ಯವಾಗಿಲ್ಲ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಶ್ರೀಕುಮಾರ್ ಅವರು ಕೇರಳದ ಎರ್ನಾಕುಲಂನ ಮಹಾರಾಜ್ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮತ್ತಷ್ಟು ಸುದ್ದಿಗಳು

Latest News

ಡಿಸೆಂಬರ್ 6ರಂದು ರಷ್ಯಾ ಅಧ್ಯಕ್ಷ ಪುತಿನ್ ಭಾರತಕ್ಕೆ ಭೇಟಿ

newsics.com ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್  ಡಿಸೆಂಬರ್ 6ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ರಷ್ಯಾ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಪ್ರವಾಸದ ವೇಳೆ ಪುತಿನ್,...

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ...

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...
- Advertisement -
error: Content is protected !!