Tuesday, January 19, 2021

ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರಡೋನಾ ಹೆಸರು

newsics.com
ನೇಪಲ್ಸ್(ಇಟಲಿ): ನೇಪಲ್ಸ್‌ನಲ್ಲಿರುವ ಸ್ಯಾನ್ ಪಾವೊಲೊ ಸ್ಟೇಡಿಯಂ ಹೆಸರು ಬದಲಾಗಲಿದೆ.
ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರ ಹೆಸರಿನಲ್ಲಿ ಸ್ಟೇಡಿಯಂಗೆ ಮರುನಾಮಕರಣ ಮಾಡಲು ನೇಪಲ್ಸ್‌ನ ಮೇಯರ್ ಗುರುವಾರ (ನ.26) ನಿರ್ಧರಿಸಿದ್ದಾರೆ.
ನಾಪೋಲಿ ಫುಟ್ಬಾಲ್‌ ಕ್ಲಬ್ ಪರ ಆಡುತ್ತಿದ್ದ ಮರಡೋನಾ ಹಲವು ಬಾರಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ಅಗಲಿದ ತಾರೆಗೆ ಗೌರವಾರ್ಥವಾಗಿ ಸ್ಟೇಡಿಯಂಗೆ ಅವರ ಹೆಸರನ್ನಿಡಲು ನೇಪಲ್ಸ್ ಮೇಯರ್ ನಿರ್ಧರಿಸಿದ್ದಾರೆ.
ಈ ಸಂಬಂಧ ಔಪಚಾರಿಕ ಪ್ರಕ್ರಿಯೆಗಳಲ್ಲಿ ನೇಪಲ್ಸ್ ಮೇಯರ್ ತೊಡಗಿದ್ದಾರೆ. ‘ನೇಪಲ್ಸ್ ಸ್ಟೇಡಿಯಂ ಅನ್ನು ಮರಡೋನಾ ಸ್ಟೇಡಿಯಂ ಎಂದು ಬದಲಾಯಿಸಲಿದ್ದೇವೆ. ಈಗಾಗಲೇ ಆ ಬಗೆಗಿನ ಪ್ರಕ್ರಿಯೆ ಆರಂಭವಾಗಿದೆ. ಔಪಚಾರಿಕ ಪ್ರಕ್ರಿಯೆಗಳು ನಡೆಯಲಿವೆ’ ಎಂದು ನೇಪಲ್ಸ್ ಮೇಯರ್ ಲುಯಿಗಿ ಡಿ ಮ್ಯಾಜಿಸ್ಟ್ರಿಸ್ ಹೇಳಿದ್ದಾರೆ.
ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಗುರುತಿಸಿಕೊಂಡಿದ್ದ ಡಿಯಾಗೋ ಮರಡೋನಾ ಅವರು ಮಂಗಳವಾರ (ನ.25) ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಬಂಧನ

ದೇಶದ ಐಟಿ ಪಿತಾಮಹ, ಟಿಸಿಎಸ್ ಸಂಸ್ಥಾಪಕ ಕೊಹ್ಲಿ ಇನ್ನಿಲ್ಲ

ಏಷ್ಯಾದಲ್ಲಿಯೇ ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚು: ಅಧ್ಯಯನ

ಕನ್ಯಾಕುಮಾರಿಯಲ್ಲಿ ಮಾದಕ ದ್ರವ್ಯ ತುಂಬಿದ್ದ ಹಡಗು ವಶ

ಮತ್ತಷ್ಟು ಸುದ್ದಿಗಳು

Latest News

ದನದ ವಿಷಯುಕ್ತ ಕಳೇಬರ ತಿಂದ 11 ರಣಹದ್ದು ಸಾವು

newsics.com ಅಸ್ಸಾಂ: ವಿಷದಿಂದ ಕೂಡಿದ ದನದ ಕಳೇಬರ ತಿಂದು ಹಿಮಾಲಯನ್ ಗ್ರಿಫನ್, ವೈಟ್ ಬ್ಯಾಕ್ಡ್ ಮತ್ತು ಸ್ಲೆಂಡರ್ ಬಿಲ್ ಜಾತಿಯ ಸುಮಾರು 11 ರಣಹದ್ದುಗಳು ಸಾವನ್ನಪ್ಪಿರುವ...

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ ಮಾರ್ಗಗಳನ್ನು ನಿರ್ಮಿಸುವ ಕೆಲಸವನ್ನು ಕೈಗೊಳ್ಳಲಾಗಿದೆ. 34.8...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...
- Advertisement -
error: Content is protected !!