Saturday, December 10, 2022

ಮೊಸಳೆಯೊಂದಿಗೆ ಮೇಯರ್ ಮದುವೆ!

Follow Us

newsics.com
ಮೆಕ್ಸಿಕೋ ಸಿಟಿ: ಇಲ್ಲಿನ ಮೇಯರ್ ಒಬ್ಬರು ಮೊಸಳೆಯನ್ನು ಮದುವೆಯಾಗಿದ್ದಾರೆ.
ಸ್ಯಾನ್‌ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೊ ಸೊಸಾ ಪುಟ್ಟ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಗುರುವಾರ ಸಾಂಕೇತಿಕವಾಗಿ ವಿವಾಹವಾದರು.
ತುತ್ತೂರಿ ಮೊಳಗುತ್ತಿದ್ದಂತೆ ಮತ್ತು ಡೋಲಿನ ಹಿಮ್ಮೇಳದಲ್ಲಿ ಸ್ಥಳೀಯರು ವಧು(ಮೊಸಳೆ)ವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ನಗರದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಕಚ್ಚದಂತೆ ಮೊಸಳೆಯ ಬಾಯಿಯನ್ನು ಭದ್ರವಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ.
ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ ಎಂದು ವಿವಾಹವನ್ನು ಆಯೋಜಿಸಿದ್ದ , ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.

ಈ ವಿಶಿಷ್ಟ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆಯಬೇಕಿದ್ದರೆ ಪ್ರಕೃತಿಯ ವರದಾನದ ಅಗತ್ಯವಿದೆ ಎಂಬ‌ ನಂಬಿಕೆಯಿದೆ. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು.

ಸಂಭ್ರಮಾಚರಣೆಯಲ್ಲಿ ಭಾಗಿಯಾಗದ ಫಡ್ನವಿಸ್: ಅನುಮಾನ ಹುಟ್ಟಿಸಿದ ಡಿಸಿಎಂ ನಡೆ

ಜಲಾವೃತ ರಸ್ತೆಯಲ್ಲಿ ವೇಕ್‌ಬೋರ್ಡಿಂಗ್‌ ಆಡಿದ ಹುಡುಗ

ಈ ರಾಜ್ಯದಲ್ಲಿ ದ್ರೌಪದಿ ಮುರ್ಮುಗೆ ಸಿಗಲ್ಲ ಒಂದೂ ವೋಟ್

ಮತ್ತಷ್ಟು ಸುದ್ದಿಗಳು

vertical

Latest News

ತೃತೀಯ ಏಕದಿನ ಪಂದ್ಯ: ದ್ವಿಶತಕ ಬಾರಿಸಿದ ಈಶಾನ್ ಕಿಶನ್, ಭಾರತ ಬೃಹತ್ ಮೊತ್ತದತ್ತ

newsics.com ಢಾಕಾ:  ಬಾಂಗ್ಲಾ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಈಶಾನ್ ಕಿಶನ್ ದ್ವಿಶತಕ ಸಿಡಿಸಿದ್ದಾರೆ. ಇದೀಗ 210 ರನ್ ಬಾರಿಸಿ ಈಶಾನ್ ಕಿಶನ್...

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯ ಭೇಟಿ ನಿಗದಿ ಪಡಿಸಲಾಗಿದೆ. ಡಿಸೆಂಬರ್ 15ರಂದು...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...
- Advertisement -
error: Content is protected !!