newsics.com
ಮೆಕ್ಸಿಕೋ: ಮಾದಕ ದ್ರವ್ಯ ವ್ಯಾಪಾರಕ್ಕೆ ಕುಖ್ಯಾತಿಪಡೆದಿರುವ ಮೆಕ್ಸಿಕೋದಲ್ಲಿ ಹತ್ಯೆ ಮುಂದುವರಿದಿದೆ. ಝಾಕಾಟೆಕಾಸ್ ಸೇತುವೆ ಬಳಿ ಆರು ಮಂದಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜುಲೈ ತಿಂಗಳಲ್ಲಿ ಇದೇ ರೀತಿ 11 ಮಂದಿಯ ಮೃತದೇಹ ಪತ್ತೆಯಾಗಿತ್ತು. ವಿರೋಧಿ ಗುಂಪುಗಳ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ ಈ ರೀತಿ ಆತ್ಮಹತ್ಯೆ ಮಾಡಿದ ರೀತಿಯಲ್ಲಿ ನೇತಾಡಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ.
ಮೆಕ್ಸಿಕೋದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಲಾಗಿದೆ. ಮೆಕ್ಸಿಕೋದಿಂದ ಮಾದಕ ದ್ರವ್ಯ ಜಗತ್ತಿನ ಇತರ ದೇಶಗಳಿಗೆ ಪೂರೈಕೆಯಾಗುತ್ತಿದೆ