newsics.com
ವಾಷಿಂಗ್ಟನ್: ಜಗತ್ತಿನ ಜನಪ್ರಿಯ ಅನಿಮೇಟಡ್ ಕಾರ್ಟೂನ್ ಬ್ರಾಂಡ್ ಗಳಲ್ಲಿ ಒಂದಾಗಿರುವ ಮಿಕ್ಕಿ ಮೌಸ್ ಮೇಲಿನ ಹಕ್ಕನ್ನು ಮನೋರಂಜನಾ ಕ್ಷೇತ್ರದ ದೈತ್ಯ ಸಂಸ್ಥೆ ಡಿಸ್ನಿ ಶೀಘ್ರದಲ್ಲಿಯೇ ಕಳೆದುಕೊಳ್ಳಲಿದೆ.
ಅಮೆರಿಕದ ಕಾನೂನಿನ ಅನ್ವಯ 2024ರಲ್ಲಿ ಇದು ಎಲ್ಲರ ಬಳಕೆಗೆ ಮುಕ್ತವಾಗಿರಲಿದೆ. ಮಿಕ್ಕಿ ಮೌಸ್ ಮೇಲೆ ಹೊಂದಿದ್ದ ಹಕ್ಕು ಕೊನೆಗೊಳ್ಳಲಿದೆ. ಅದು ಸಾರ್ವತ್ರಿಕ ಬಳಕೆಗೆ ಮುಕ್ತವಾಗಿರಲಿದೆ.
1928 ಅಕ್ಚೋಬರ್ 4ರಂದು ಮಿಕ್ಕಿ ಮೌಸ್ ಜನ್ಮ ತಳೆದಿತ್ತು. ಅನಿಮೇಟೆಡ್ ಕಾರ್ಟೂನ್ ಕ್ಷೇತ್ರದಲ್ಲಿ ಈ ಕ್ಯಾರೆಕ್ಟರ್ ಸಂಚಲನವನ್ನು ಸೃಷ್ಟಿಸಿತ್ತು. ಬರೋಬರಿ 95 ವರ್ಷಗಳ ಬಳಿಕ ಇದರ ಮೇಲಿನ ಹಕ್ಕು ಕೊನೆಗೊಳ್ಳಲಿದ್ದು, ಮುಕ್ತ ಬಳಕೆಗೆ ದಾರಿ ಮಾಡಿಕೊಡಲಿದೆ