ಮಾಸ್ಕೋ: ರಷ್ಯಾದ ನೂತನ ಪ್ರಧಾನಿಯಾಗಿ ಫೆಡರಲ್ ತೆರಿಗೆ ಸೇವೆಯ ಮಾಜಿ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ನೇಮಕಗೊಂಡಿದ್ದರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಶುಸ್ಟಿನ್ ಅವರನ್ನು ನೇಮಕ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ.
ಸಂವಿಧಾನ ತಿದ್ದುಪಡಿಗಾಗಿ ಪುಟಿನ್ ತಮ್ಮ ಸಚಿವ ಸಂಪುಟದ ರಾಜೀನಾಮೆ ಪಡೆದುಕೊಂಡಿದ್ದು, ಪ್ರಧಾನಿ ಹುದ್ದೆಗೆ ಮಾಡಲಾಗಿರುವ ಮಿಖೈಲ್ ಮಿಶುಸ್ಟಿನ್ ಅವರ ನೇಮಕದ ಬಗ್ಗೆ ಸಂಸದರು ಈಗ ಸಮಾಲೋಚನೆ ಆರಂಭಿಸಿದ್ದಾರೆ. ತಮ್ಮ ರಾಜಕೀಯ ಬುನಾದಿಯನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಪುಟಿನ್ ಅವರು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಅಂದಹಾಗೆ, 67 ವರ್ಷದ ಪುಟಿನ್ 1999ರಿಂದಲೂ ರಷ್ಯಾ ಅಧ್ಯಕ್ಷರಾಗಿದ್ದಾರೆ.