ಸೊಮಾಲಿಯಾ: ರಾಜಧಾನಿ ಮೊಗಡಿಶುದಲ್ಲಿ ನಡೆದ ಭೀಕರ ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ 80ಕ್ಕೂ ಹೆಚ್ಚು ಮಂದಿ ಅಸುನೀಗಿದ್ದು, ಮಕ್ಕಳೂ ಸೇರಿ ನೂರಾರು ಜನ ಗಾಯಗೊಂಡಿದ್ದಾರೆ.
ಮೊಗಡಿಶುದಲ್ಲಿನ ತೆರಿಗೆ ಸಂಗ್ರಹ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ವೇಳೆ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದುದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಹುಸೇನ್ ಹೇಳಿದ್ದಾರೆ.
ಅಲ್ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್-ಶಬಾಬ್ ಉಗ್ರರು ಪದೇಪದೆ ಸೊಮಾಲಿಯಾ ಮೇಲೆ ದಾಳಿ ನಡೆಸುತ್ತಿದ್ದು, ಈ ಬಾರಿ ಭೀಕರ ದಾಳಿ ನಡೆಸಿದ್ದಾರೆ.
ಮೊಗಡಿಶುವಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಬಾಂಬ್ ದಾಳಿ ಇದೆಂದು ಹೇಳಲಾಗಿದೆ.