newsics.com
ಬೀಜಿಂಗ್: ನೈಋತ್ಯ ಚೀನಾದ ಕಲ್ಲಿದ್ದಲು ಗಣಿಗಾರಿಕೆ ವೇಳೆ ಸಂಭವಿಸಿದ ಸ್ಪೋಟದಲ್ಲಿ 16 ಕಾರ್ಮಿಕರು ಸಾವನ್ನಪ್ಪಿದ ದುರಂತ ಭಾನುವಾರ ಬೆಳಗ್ಗೆ ಸಂಭವಿಸಿದೆ. ಓರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.
ಕನ್ವೆಯರ್ ಸ್ಫೋಟದಲ್ಲಿ ಅಪಾಯಕಾರಿ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾಗಿದೆ ಎಂದು ಚೀನಾ ಸರ್ಕಾರಿ ಅಧೀನದ ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ.
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಂಭವಿಸಿದ ದುರಂತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಕ್ವಿಜಿಯಾಂಗ್ ಜಿಲ್ಲೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸಾಂಗ್ ಜೋ ಕಲ್ಲಿದ್ದಲು ಗಣಿ ಚಾಂಗ್ಕಿಂಗ್ ಎನರ್ಜಿ ಎಂಬ ರಾಜ್ಯ ಇಂಧನ ಸಂಸ್ಥೆಗೆ ಸೇರಿದ್ದಾಗಿದೆ. ಈ ಗಣಿ ಚಾಂಗ್ ಕ್ವಿಂಗ್ ನಗರದಿಂದ ಹೊರಪ್ರದೇಶದಲ್ಲಿದೆ.
ಕಲ್ಲಿದ್ದಲು ಗಣಿಯಲ್ಲಿ ದುರಂತಗಳು ಸಾಮಾನ್ಯವಾಗಿದ್ದು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನೈಋತ್ಯ ವಿಭಾಗದ ಕ್ವಿಜಾವೋ ಪ್ರದೇಶದಲ್ಲಿ ಸಂಭವಿಸಿದ ಕಲ್ಲಿದ್ದಲು ಅನಿಲ ಸ್ಫೋಟದಲ್ಲಿ ಕನಿಷ್ಠ 14 ಮಂದಿ ಪ್ರಾಣ ಬಿಟ್ಟಿದ್ದರು.
ಗಣಿ ಸ್ಫೋಟ; 16 ಕಾರ್ಮಿಕರು ಸಾವು
Follow Us